ಟಂಟಂ-ಲಾರಿ ಡಿಕ್ಕಿ; ಮೂವರ ಸಾವು

ಶನಿವಾರ, ಜೂಲೈ 20, 2019
24 °C

ಟಂಟಂ-ಲಾರಿ ಡಿಕ್ಕಿ; ಮೂವರ ಸಾವು

Published:
Updated:

ಸಿಂದಗಿ: ಟಂ ಟಂ ಮತ್ತು ಲಾರಿ ನಡುವೆ ಬುಧವಾರ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟು, 13 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ಗುಲ್ಬರ್ಗದಿಂದ ವಿಜಾಪುರಕ್ಕೆ ಬರುತ್ತಿದ್ದ ಲಾರಿ ಮತ್ತು ಸಿಂದಗಿಯಿಂದ ಕಣಮೇಶ್ವರಕ್ಕೆ ಹೊರಟಿದ್ದ ಟಂ ಟಂ  ನಡುವೆ ಸಂಭವಿಸಿದ ಅಪಘಾತದಲ್ಲಿ ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕಣಮೇಶ್ವರದ ಹುಲ್ಲೆಪ್ಪ ಸಾಯಬಣ್ಣ ಸುಂಗಠಾಣ (32), ಹಣಮಂತ ಸಾಯಬಣ್ಣ ಕೆಲೋಜಿ (27), ಶಹನಾಜ್‌ಬೇಗಂ ದಾವಲಸಾಬ ಹಚಡದ (26) ಮೃತಪಟ್ಟಿದ್ದಾರೆ.ನಾಲ್ಕು ಮಕ್ಕಳು ಸೇರಿದಂತೆ 13 ಜನರು ಗಂಭೀರವಾಗಿ ಗಾಯಗೊಂಡಿದ್ದು ಅವರು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ವಿಜಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.  ಸಿಂದಗಿ ಠಾಣೆ ಸಬ್ ಇನ್ಸ್‌ಪೆಕ್ಟರ್ ರಮೇಶ ರೊಟ್ಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry