ಶನಿವಾರ, ಮೇ 8, 2021
26 °C

ಟಟ್ರಾ ಅವ್ಯವಹಾರ: ಮಾಜಿ ಸೇನಾಧಿಕಾರಿಗಳ ಮನೆಗಳಲ್ಲಿ ಸಿಬಿಐ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಸೇನೆಗೆ ಟಟ್ರಾ ಟ್ರಕ್‌ಗಳನ್ನು ಪೂರೈಸುವಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಿಬಿಐನ ಅಧಿಕಾರಿಗಳು ಬುಧವಾರ ದೆಹಲಿ ಹಾಗೂ ನೊಯಿಡಾದಲ್ಲಿರುವ ಇಬ್ಬರು ಮಾಜಿ ಸೇನಾ ಅಧಿಕಾರಿಗಳ ಮನೆಗಳಲ್ಲಿ ಶೋಧನಾ ಕಾರ್ಯಾಚರಣೆ ನಡೆಸಿದರು.ಇದೇ ವೇಳೆ ಬಿಇಎಂಎಲ್ ಮೂಲಕ ರಕ್ಷಣಾ ಇಲಾಖೆ ಟಟ್ರಾ ಟ್ರಕ್‌ಗಳನ್ನು ಪೂರೈಸಿರುವ ಬ್ರಿಟನ್ ಮೂಲದ ವೆಕ್ಟ್ರಾ ಕಂಪೆನಿಯ ಅಧಿಕಾರಿಯೊಬ್ಬರ ಮನೆಯಲ್ಲೂ ಸಹ ಶೋಧನಾ ಕಾರ್ಯ ನಡೆಸಲಾಯಿತು ಎಂದು ಸಿಬಿಐ ಮೂಲಗಳು ತಿಳಿಸಿವೆ.ತನಿಖೆಗೆ ತೊಂದರೆಯಾಗುತ್ತದೆ ಎನ್ನುವ ಉದ್ದೇಶದಿಂದ ಶೋಧನೆಗೆ ಒಳಗಾಗಿರುವ ಸೇನಾಧಿಕಾರಿಗಳ ಹಾಗೂ ವೆಕ್ಟ್ರಾ ಕಂಪೆನಿಯ ಅಧಿಕಾರಿಯ ಹೆಸರನ್ನು ಬಹಿರಂಗಪಡಿಸಲು ಸಿಬಿಐ ಅಧಿಕಾರಿಗಳು ನಿರಾಕರಿಸಿದ್ದಾರೆ.ಮಂಗಳವಾರವಷ್ಟೇ ಈ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐನ ಅಧಿಕಾರಿಗಳು ಬಿಇಎಂಎಲ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ವಿ.ಆರ್.ನಟರಾಜ್, ಬಿಇಎಂಎಲ್‌ನ ಮಾಜಿ ಸಂಗ್ರಹ ನಿರ್ದೇಶಕ ವಿ.ಮೋಹನ್ ಹಾಗೂ ಅನಿವಾಸಿ ಉದ್ಯಮಿ ರವಿ ರಿಶಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.