ಗುರುವಾರ , ಮೇ 13, 2021
24 °C

ಟಟ್ರಾ ಹಗರಣ: ಬಿಇಎಂಎಲ್ ಅಧಿಕಾರಿಗಳ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸೇನೆಗೆ ಟಟ್ರಾ ಟ್ರಕ್‌ಗಳನ್ನು ಪೂರೈಸಿದ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸೋಮವಾರ ಭಾರತ್ ಅರ್ಥ್ ಮೂವರ್ಸ್‌ ಲಿಮಿಟೆಡ್ (ಬಿಇಎಂಎಲ್)ನ 3ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದೆ.ಟಟ್ರಾ ಖರೀದಿ ವ್ಯವಹಾರದ ಸೂಕ್ಷ್ಮ ಅಂಶಗಳನ್ನು ಅರಿಯುವ ನಿಟ್ಟಿನಲ್ಲಿ, `ಬಿಇಎಂಎಲ್~ನ ಹಣಕಾಸು ವಿಭಾಗದ ಮುಖ್ಯಸ್ಥರು, ಜಾಗೃತ ದಳದ ಅಧಿಕಾರಿ ಸೇರಿದಂತೆ ಮೂವರನ್ನು ಸಿಬಿಐ ಪೊಲೀಸರು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಆದರೆ, ಈ ಅಧಿಕಾರಿಗಳು ಹಗರಣಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲವಾದ್ದರಿಂದ ಅವರ ಹೆಸರು ಬಹಿರಂಗಪಡಿಸಲು ಸಿಬಿಐ ಮೂಲಗಳು ನಿರಾಕರಿಸಿವೆ.`ಟಟ್ರಾ ಸಿಪೋಕ್ಸ್ ಯುಕೆ~ ಟಟ್ರಾ ಟ್ರಕ್‌ಗಳ ಮೂಲ ಉತ್ಪಾದಕನಲ್ಲದಿದ್ದರೂ 1997ರಲ್ಲಿ ಅದರ ಜತೆ ಒಪ್ಪಂದ ಮಾಡಿಕೊಂಡಿದ್ದು, 2003ರಲ್ಲಿ ಆ ಒಪ್ಪಂದ ನವೀಕರಿಸಿದ್ದು ಏಕೆ ಎಂದು ಸಿಬಿಐ ಪ್ರಶ್ನಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.