ಟನ್‌ ಕಬ್ಬಿಗೆ ₨2200 ಸರ್ಕಾರಕ್ಕೆ ‘ಸಿಎಸಿಪಿ’ ಸಲಹೆ

7

ಟನ್‌ ಕಬ್ಬಿಗೆ ₨2200 ಸರ್ಕಾರಕ್ಕೆ ‘ಸಿಎಸಿಪಿ’ ಸಲಹೆ

Published:
Updated:

ನವದೆಹಲಿ(ಪಿಟಿಐ): 2014–15ನೇ ಸಾಲಿನ ಪ್ರತಿ ಟನ್‌ ಕಬ್ಬಿಗೆ ₨220ಕ್ಕೆ ಏರಿಸಬೇಕೆಂದು ಕೇಂದ್ರಕ್ಕೆ ‘ಕೃಷಿ ವೆಚ್ಚ ಮತ್ತು ಧಾರಣೆ ಆಯೋಗ’(ಸಿಎಸಿಪಿ) ಸೋಮವಾರ ಸಲಹೆ ನೀಡಿದೆ.ಕಬ್ಬು ಕೃಷಿಗೆ ಸಂಬಂಧಿಸಿದಂತೆ ಒಟ್ಟಾರೆ ವೆಚ್ಚವನ್ನೆಲ್ಲ ಲೆಕ್ಕಹಾಕಿ ಹಾಗೂ ಕಬ್ಬು ಬೆಳೆಯ ಆಂತರಿಕ ಲಭ್ಯತೆ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿನ ದರಗಳತ್ತಲೂ ಗಮನ ಹರಿಸಿ, ಜಾಗ್ರತೆಯಿಂದ ಚಿಂತನೆ ನಡೆಸಿ ಪ್ರತಿ ಕ್ವಿಂಟಲ್‌ಗೆ ₨220 (ಟನ್‌ಗೆ ₨2200) ‘ಎಫ್‌ಆರ್‌ಪಿ’ ನೀಡಬಹುದು ಎಂಬ ಸಲಹೆಯನ್ನು ಸರ್ಕಾರಕ್ಕೆ ನೀಡ ಲಾಗಿದೆ ಎಂದು ‘ಸಿಎಸಿಪಿ’ಯ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry