ಟರ್ಕಿ ಭೂಕಂಪ: ಸತ್ತವರ ಸಂಖ್ಯೆ 459ಕ್ಕೆ ಏರಿಕೆ

7

ಟರ್ಕಿ ಭೂಕಂಪ: ಸತ್ತವರ ಸಂಖ್ಯೆ 459ಕ್ಕೆ ಏರಿಕೆ

Published:
Updated:

 ಅಂಕಾರಾ (ಐಎಎನ್ಎಸ್): ಭಾನುವಾರದ ಭೂಕಂಪದಿಂದ ತತ್ತರಿಸಿದ್ದ ಟರ್ಕಿಯಲ್ಲಿ ಬುಧವಾರ ಸತ್ತವರ ಸಂಖ್ಯೆ 459ಕ್ಕೆ ಏರಿದೆ ಮತ್ತು 1352 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಭೂಕಂಪದ ಕಾರಣ 75,000 ಜನರಿರುವ ಇರಾನ್ ಗಡಿಯಲ್ಲಿನ ಎರಿಕ್ಸ್ ಪಟ್ಟಣದಲ್ಲಿ ಸುಮಾರು 80 ಬಹುಮಹಡಿ ಕಟ್ಟಡಗಳು ನೆಲಕ್ಕೆ ಕುಸಿದಿವೆ.

ಭೂಕಂಪ ಸಂಭವಿಸಿರುವ ಟರ್ಕಿಯ ಆಗ್ನೇಯ ದಿಕ್ಕಿನಲ್ಲಿರುವ ವಾನ್ ಪ್ರಾಂತ್ಯಕ್ಕೆ 3,346 ಪರಿಹಾರ ಸಿಬ್ಬಂದಿ ಧಾವಿಸಿದ್ದು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. 

ವಾನ್ ಪ್ರಾಂತ್ಯದ ಎರಿಕ್ಸ್ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಮಣ್ಣಿನ ಅಡಿ ಸಿಲುಕಿದ್ದ ಎರಡು ವಾರಗಳ ಮಗುವನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆ ಬುಧವಾರ ಝಮಾನ್ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry