ಬುಧವಾರ, ಏಪ್ರಿಲ್ 14, 2021
32 °C

ಟಾಟಾ:ರೂ 1.2 ಲಕ್ಷ ಕೋಟಿ ಹೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಹಲವಾರು ಬಗೆಯ ಉದ್ದಿಮೆ ವಹಿವಾಟು ನಡೆಸುವ ಟಾಟಾ ಸಮೂಹ ಮುಂದಿನ ಐದು ವರ್ಷಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ      ್ಙ 1.2ಲಕ್ಷ ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡುವ ಯೋಜನೆ ಪ್ರಕಟಿಸಿದೆ.ಈ ಹೂಡಿಕೆಯ ಮೂಲಕ 150 ಶತಕೋಟಿ ಡಾಲರ್      (್ಙ  6.64 ಲಕ್ಷ ಕೋಟಿ) ವರಮಾನ ಸಂಗ್ರಹಿಸುವ ಯೋಜನೆಯನ್ನೂ ಸಂಸ್ಥೆ ಹೊಂದಿದೆ. ಸದ್ಯ ದೇಶದಲ್ಲಿ ಟಾಟಾ ಸಮೂಹದ 99 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಶೇ 50ರಷ್ಟು ಯೋಜಿತ ಹೂಡಿಕೆಗಳು  ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದವುಗಳಾಗಿವೆ. ಇದನ್ನು ಹೊರತು ಪಡಿಸಿದರೆ ಉಕ್ಕು ಮತ್ತು ವಾಹನಗಳ ಬಿಡಿಭಾಗ ಉದ್ಯಮಕ್ಕೆ ಕಂಪೆನಿ ಹೆಚ್ಚಿನ ಮಹತ್ವ ನೀಡಿದೆ.‘ಮುಂದಿನ ಐದು ವರ್ಷಗಳಲ್ಲಿ ನಾವು ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಂದು ಕ್ಷೇತ್ರವೂ ಜಾಗತಿಕ ಮನ್ನಣೆಗೆ ಪಾತ್ರವಾಗಬೇಕು, ಆ ನಿಟ್ಟಿನಲ್ಲಿ ಹೊಸ ಹೂಡಿಕೆಯನ್ನು ಕೈಗೆತ್ತಿಕೊಂಡಿದ್ದೇವೆ’ ಎಂದು ಟಾಟಾ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಎ ಚೌಕರ್ ತಿಳಿಸಿದ್ದಾರೆ.  1.62 ್ಙ ಲಕ್ಷ ಕೋಟಿಗಳನ್ನು ಭಾರತೀಯ ಮಾರುಕಟ್ಟೆಗೆ ಮೀಸಲಿಡಲಾಗಿದೆ. ಇಂಧನ, ಉಕ್ಕು, ವಾಹನಗಳ ಬಿಡಿಭಾಗ, ಟೆಲಿಕಮ್ಯುನಿಕೇಷನ್ಸ್, ರಸಾಯನಿಕಗಳು ಸೇರಿದಂತೆ ಹಲವು ಉದ್ದಿಮೆಗಳಲ್ಲಿ ಬಂಡವಾಳ ತೊಡಗಿಸಲಾಗುವುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.