`ಟಾಟಾ ಅತ್ಯುತ್ತಮ ಜಾಗತಿಕ ಬ್ರಾಂಡ್'

7
`ಅಸೋಚಾಂ' ಸಮೀಕ್ಷೆ

`ಟಾಟಾ ಅತ್ಯುತ್ತಮ ಜಾಗತಿಕ ಬ್ರಾಂಡ್'

Published:
Updated:

ನವದೆಹಲಿ (ಪಿಟಿಐ): ಟಾಟಾ ಸಮೂಹ ಭಾರತ ಮತ್ತು ವಿದೇಶದಲ್ಲಿ `ಅತ್ಯುತ್ತಮ ಜಾಗತಿಕ ಬ್ರಾಂಡ್' ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ)ದ ಸಮೀಕ್ಷೆ ತಿಳಿಸಿದೆ.ಪ್ರತಿಷ್ಠಿತ ಕುಟುಂಬದ ಉದ್ಯಮವಾದ `ಟಾಟಾ ಸಮೂಹ'ವನ್ನು ರತನ್ ಟಾಟಾ ಅವರು ಜಾಗತಿಕ ವೃತ್ತಿಪರ ಬ್ರಾಂಡ್ ಆಗಿ ರೂಪಿಸಿದರು. `ಟಾಟಾ ಸನ್ಸ್' ಅಧ್ಯಕ್ಷರಾಗಿ 21 ವರ್ಷ ಕಾಲ ಕಾರ್ಯನಿರ್ವಹಿಸಿದ ರತನ್, `ಟಾಟಾ ಬ್ರಾಂಡ್' ಮೌಲ್ಯ ವೃದ್ಧಿಸಿದರು. ಅವರ ಉತ್ತರಾಧಿಕಾರಿ ಸೈರಸ್ ಮಿಸ್ತ್ರಿ ಕೂಡ ಕಂಪೆನಿಯನ್ನು ಯಶಸ್ವಿನ ಶೃಂಗಕ್ಕೆ ಕೊಂಡೊಯ್ಯುತ್ತಾರೆ ಎಂದು ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 70ರಷ್ಟು ದೇಶೀಯ ಮತ್ತು ವಿದೇಶಿ ಕಂಪೆನಿಗಳ `ಸಿಇಒ'ಗಳು ಅಭಿಪ್ರಾಯಪಟ್ಟಿದ್ದಾರೆ.ಟಾಟಾ ಸಮೂಹದ ಹೆಚ್ಚಿನ ವರಮಾನ ವಿದೇಶದಿಂದಲೇ ಹರಿದು ಬರುತ್ತದೆ. ಕಂಪೆನಿ 80ಕ್ಕೂ ಹೆಚ್ಚು ದೇಶಗಳಲ್ಲಿ ವಹಿವಾಟು ಹೊಂದಿದೆ. ಸದ್ಯದ ಜಾಗತಿಕ ಆರ್ಥಿಕ ಅಸ್ಥಿರತೆ ಎದುರಿಸಿ, ಉದ್ಯಮ ವಿಸ್ತರಿಸುವುದು ಮಿಸ್ತ್ರಿ ಅವರ ಮುಂದಿರುವ ದೊಡ್ಡ ಸವಾಲು ಎಂದು ಉದ್ಯಮ ತಜ್ಞರು ವಿಶ್ಲೇಷಿಸಿದ್ದಾರೆ.ಇನ್ಫೋಸಿಸ್, ವಿಪ್ರೊ, ಮಹೀಂದ್ರಾ ಮತ್ತು ಆದಿತ್ಯಾ ಬಿರ್ಲಾ ಸಮೂಹಗಳು  `ಜಾಗತಿಕ ಬ್ರಾಂಡ್' ಆಗಿ ಗುರುತಿಸಿಕೊಂಡಿರುವ ಇತರೆ ಭಾರತೀಯ ಕಂಪೆನಿಗಳು ಎಂದು `ಅಸೋಚಾಂ' ವರದಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry