ಟಾಟಾ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ವಿಫಲ?

7

ಟಾಟಾ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ವಿಫಲ?

Published:
Updated:
ಟಾಟಾ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ವಿಫಲ?

ಮುಂಬೈ (ಪಿಟಿಐ):  ಟಾಟಾ ಸಮೂಹದ ಅಧ್ಯಕ್ಷರಾಗಿರುವ ರತನ್ ಟಾಟಾ ಅವರ ಉತ್ತರಾಧಿಕಾರಿ ಶೋಧಿಸುವಲ್ಲಿ ಆಯ್ಕೆ ಸಮಿತಿಯು ವಿಫಲವಾಗಿದೆ.

ಟಾಟಾ ಅವರ ಉತ್ತರಾಧಿಕಾರಿ ಗುರುತಿಸಲು ಎಂಟು ತಿಂಗಳ ಹಿಂದೆ ಈ ಸಮಿತಿ ರಚಿಸಲಾಗಿತ್ತು. ಟಾಟಾ ಸಮೂಹದ ಬದಲಿ ಮುಖ್ಯಸ್ಥನನ್ನು ಶೋಧಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ರತನ್ ಟಾಟಾ ಅವರ ಉತ್ತರಾಧಿಕಾರಿ ಶೋಧಿಸುವಲ್ಲಿ ನಮ್ಮಿಂದ ಸಾಧ್ಯವಾಗಿಲ್ಲವೆಂದು ಸಮಿತಿ ನಿರ್ಧಾರಕ್ಕೆ ಬಂದಿದೆ ಎಂದು ಟಾಟಾ ಸನ್ಸ್‌ನ ನಿರ್ದೇಶಕರಾಗಿರುವ ಮತ್ತು ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿರುವ ಆರ್. ಕೆ. ಕೃಷ್ಣಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಸಂಸ್ಥೆಯ ಅಂತರ್‌ಜಾಲ ತಾಣದಲ್ಲಿ ಪ್ರಕಟಿಸಲಾದ ಸಂದರ್ಶನದಲ್ಲಿ ಅವರು ಈ ಸಂಗತಿ ಬಹಿರಂಗಪಡಿಸಿದ್ದಾರೆ.

ಟಾಟಾ ಸಮೂಹದ ಅಂಗಸಂಸ್ಥೆಯಾಗಿರುವ ಟಾಟಾ ಸನ್ಸ್, ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಉತ್ತರಾಧಿಕಾರಿ ಶೋಧನಾ ಸಮಿತಿ ರಚಿಸಿತ್ತು.  2012ರ ಡಿಸೆಂಬರ್‌ಗೆ 75 ವರ್ಷದವರಾಗಲಿರುವ ರತನ್ ಟಾಟಾ ಸೇವಾ ನಿವೃತ್ತಿ ಆಗಲಿದ್ದಾರೆ. ತಮ್ಮ ನಿವೃತ್ತಿ ನಂತರ ಬಹುಶಃ ವಿದೇಶಿ ಪ್ರಜೆಯೊಬ್ಬರು ನೇಮಕಗೊಳ್ಳುವ  ಸಾಧ್ಯತೆಗಳು ಇವೆ ಎಂದು ಸ್ವತಃ ಟಾಟಾ ಅವರೇ ಈ ಹಿಂದೆ ಇಂಗಿತ ವ್ಯಕ್ತಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry