ಟಾಟಾ ಕೆಮಿಸ್ಟ್ರಿ ಟೀಚರ್ ಪ್ರಶಸ್ತಿ

7

ಟಾಟಾ ಕೆಮಿಸ್ಟ್ರಿ ಟೀಚರ್ ಪ್ರಶಸ್ತಿ

Published:
Updated:

ವಿಶ್ವದಾದ್ಯಂತ ಉತ್ಪಾದನಾ ಘಟಕಗಳನ್ನು ಹೊಂದಿರುವ ಟಾಟಾ ಕೆಮಿಕಲ್ಸ್, ರಸಾಯನಶಾಸ್ತ್ರವನ್ನು ಪ್ರೀತಿಸುವ ಶಿಕ್ಷಕರು ಹಾಗೂ ಯುವಜನರನ್ನು ಪ್ರೋತ್ಸಾಹಿಸುವ ಸಲುವಾಗಿ ಅನೇಕ ಉತ್ತೇಜನಾ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.ವಿಶ್ವಸಂಸ್ಥೆ 2011ನೇ ವರ್ಷವನ್ನು ಅಂತರರಾಷ್ಟ್ರೀಯ ರಸಾಯನಶಾಸ್ತ್ರ ವರ್ಷ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಟಾಟಾ ಕೆಮಿಕಲ್ಸ್ ಅತ್ಯುತ್ತಮ ರಸಾಯನಶಾಸ್ತ್ರ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಸಲುವಾಗಿ `ಬೆಸ್ಟ್ ಕೆಮಿಸ್ಟ್ರಿ ಟೀಚರ್ಸ್‌ ಅವಾರ್ಡ್~ ಆರಂಭಿಸಿದೆ. ಇದಕ್ಕೆ ರಸಾಯನಶಾಸ್ತ್ರ ಶಿಕ್ಷಕರ ಒಕ್ಕೂಟ ಸಹಯೋಗ ನೀಡಿದೆ.ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ರಸಾಯನಶಾಸ್ತ್ರ ಬೋಧಿಸುತ್ತಿರುವ ಶಿಕ್ಷಕರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಪ್ರಶಸ್ತಿ ನೀಡಲಾಗುವುದು.ಇದರ ಜತೆಗೆ ಟಾಟಾ ಕೆಮಿಕಲ್ಸ್, ರಸಾಯನಶಾಸ್ತ್ರ ಬೋಧನೆಯಲ್ಲಿ ಸಂಶೋಧಾನತ್ಮಕ ಹೆಜ್ಜೆಯಿಟ್ಟ ಶಿಕ್ಷಕರು, ರಸಾಯನಶಾಸ್ತ್ರ ಕಲಿಕೆಗೆ ಉತ್ತೇಜನ ನೀಡುವ ಶಿಕ್ಷಕರು ಹಾಗೂ ಸಾಮಾಜಿಕ ತಾಣ ಆಧರಿಸಿ ಒಬ್ಬರು ಜನಪ್ರಿಯ ರಸಾಯನಶಾಸ್ತ್ರ ಶಿಕ್ಷಕರನ್ನು ಆಯ್ಕೆ ಮಾಡಿ ಗೌರವಿಸಲಿದೆ.`ನಾವೆಲ್ಲ ಶಿಕ್ಷಕರನ್ನು ಪ್ರೀತಿಸುತ್ತೇವೆ. ಆದಾಗ್ಯೂ ಶಿಕ್ಷಣ ಮುಗಿದ ಬಳಿಕ ಶಿಕ್ಷಕರನ್ನು ಮರೆತುಬಿಡುತ್ತೇವೆ. ಈಗ ರಸಾಯನಶಾಸ್ತ್ರ ಶಿಕ್ಷಕರ ಒಕ್ಕೂಟದ ಜೊತೆ ಕೈಜೋಡಿಸಿ ಈ ಪ್ರಶಸ್ತಿ ನೀಡಲು ಸಂತಸವಾಗುತ್ತಿದೆ~ ಎಂದು ಟಾಟಾ ಕೆಮಿಕಲ್ಸ್ ಮುಖ್ಯ ವಿಜ್ಞಾನ ಅಧಿಕಾರಿ ಡಾ.ಮುರಳಿ ಶಾಸ್ತ್ರಿ ತಮ್ಮ ಖುಷಿ ಹಂಚಿಕೊಂಡರು.ಅರ್ಜಿಯನ್ನುwww.humantouchofchemistry.com ಸಲ್ಲಿಸಬಹುದು ಅಥವಾ ರಾಸಾಯನಶಾಸ್ತ್ರ ಶಿಕ್ಷಕರ ಒಕ್ಕೂಟದ ಮೂಲಕವೂ ನೀಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry