ಟಾಟಾ ಡೊಕೊಮೊ 3ಜಿ ಸವಾರಿ

ದೇಶದಲ್ಲಿ ಮೂರನೆಯ ತಲೆಮಾರಿನ ತರಂಗಾಂತರ ಸೇವೆ (3ಜಿ) ಸೇವೆ ಜಾರಿಗೊಳಿಸಿದ ಮೊದಲ ಖಾಸಗಿ ಸೇವಾ ಸಂಸ್ಥೆ ಟಾಟಾ ಡೊಕೊಮೊ. ಏಕಕಾಲದಲ್ಲಿ ದೇಶದ 9 ದೂರವಾಣಿ ವೃತ್ತಗಳಲ್ಲಿ 3ಜಿ ಸೇವೆ ಆರಂಭಿಸಿದ ಹೆಗ್ಗಳಿಕೆಯೂ ಕಂಪನಿಗೆ ಸಲ್ಲುತ್ತದೆ. ಮನೋರಂಜನೆ, ವಾಣಿಜ್ಯ, ಶಿಕ್ಷಣ ಆಧಾರಿತ ಸೇವೆಗಳನ್ನು 3ಜಿ ಮೂಲಕ ಸಂಸ್ಥೆ ವಿಸ್ತರಿಸುತ್ತಿದೆ.
ಡೊಕೊಮೊ 3ಜಿ ಲೈಫ್ನಲ್ಲಿ `ಲೈವ್ ಟಿವಿ~ ವೀಕ್ಷಿಸುವ ಅವಕಾಶ ಇದೆ. ಇಲ್ಲಿ ಕಾರ್ಯಕ್ರಮಗಳ ಕುರಿತು ತಿಳಿದುಕೊಳ್ಳಲು ಪ್ರೊಗ್ರಾಂ ಗೈಡ್ ನೆರವು ಪಡೆಯಬಹುದು. ಮುಖಾಮುಖಿ ಸಂಭಾಷಣೆ ನಡೆಸಲು ವಿಡಿಯೊ ಕಾಲಿಂಗ್ ಸೇವೆ ಜಾರಿಯಲ್ಲಿದೆ. ಈ ತಂತ್ರಜ್ಞಾನವು ರಿಯಲ್ ಟೈಮ್ ವೀಡಿಯೋ ಕಾಲಿಂಗ್ ಲೋಕಕ್ಕೆ ಗ್ರಾಹಕರನ್ನು ಕರೆದೊಯ್ಯುತ್ತದೆ. ಇದು ಹೆಚ್ಚು ಮಾತನಾಡುವ, ನೋಡುವ, ಹಂಚಿಕೊಳ್ಳುವ ಅವಕಾಶ ನೀಡುತ್ತದೆ ಎನ್ನುತ್ತದೆ ಕಂಪನಿ.
ವೀಡಿಯೊ ಆನ್ ಡಿಮ್ಯಾಂಡ್ ಸೌಲಭ್ಯದ ಮೂಲಕ ಗ್ರಾಹಕರು ಆಯ್ದ, ವಿಶೇಷ ದೃಶ್ಯ ತುಣುಕುಗಳನ್ನು ತಮಗೆ ಬೇಕಾದಾಗ, ಬೇಕೆಂದಲ್ಲಿ ನೋಡಬಹುದು ಮತ್ತು ಡೌನ್ಲೋಡ್ ಮಾಡಿಕೊಳ್ಳಬಹುದು.
ಮೊಬೈಲ್ ವೀಕ್ಷಣೆಗಾಗಿಯೇ ಮಾಡಲಾದ ಸಿನಿಮಾಗಳನ್ನು ನೋಡಬಹುದು. ಹವಾಮಾನ, ಸುದ್ದಿಗಳನ್ನು ಪಡೆಯಬಹುದು. `ಡೊಕೊಮಿಕ್ಸ್~ ಕಾಮಿಕ್ ಸೇವೆಯ ಮೂಲಕ ಸ್ಪೈಡರ್ಮ್ಯಾನ್, ಎಕ್ಸ್-ಮ್ಯಾನ್ ಚಿತ್ರಗಳ ಮನೋರಂಜನೆ ಪಡೆಯಬಹುದು.
ಧಾರ್ಮಿಕ ಕೇಂದ್ರಗಳ ಪ್ರಾರ್ಥನೆ ಕೇಳುವ `ಲೈವ್ ಪ್ರೇಯರ್~ ,ಸ್ಥಳ ಪರಿಚಯ ನೀಡುವ `ರೂಟ್ ಫೈಂಡರ್~ ಶ್ರವ್ಯ ಮತ್ತು ದೃಶ್ಯದ ಮೂಲಕ ಮಾರ್ಗಸೂಚಿ ನೀಡುವ `ಸ್ಮಾರ್ಟ್ ಪೈಲಟ್~ ಸೇರಿದಂತೆ ಹಲವು ಸೌಲಭ್ಯಗಳು ಡೊಕೊಮೊ 3ಜಿ ಯಲ್ಲಿ ಅಡಕವಾಗಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.