ಸೋಮವಾರ, ಜೂನ್ 21, 2021
27 °C

ಟಾಟಾ ಪ್ಲಾಂಟೇಷನ್ ರಿಯಾಯಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಟಾ ಪ್ಲಾಂಟೇಷನ್ ರಿಯಾಯಿತಿ

ಉದ್ಯಾನನಗರಿಯ ಮಂದಿ ಬೇಸಿಗೆ ರಜೆಯನ್ನು ಅನುಭವಿಸಲು ತಮ್ಮ ವೇಳಾಪಟ್ಟಿ ಸಿದ್ಧಪಡಿಸಿಕೊಂಡಿದ್ದರೆ, ಅದನ್ನು ಬದಲಿಸಿಕೊಳ್ಳಬಹುದು.ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಟಾಟಾ ಕಾಫಿ ಪ್ಲಾಂಟೇಷನ್ ಪ್ರವಾಸಿ ಕೇಂದ್ರವು ಮಹಿಳೆಯರಿಗಾಗಿ ವಿಶೇಷ ರಿಯಾಯಿತಿ ಘೋಷಿಸಿದೆ.ಕಿತ್ತಳೆ ನಾಡು ಕೊಡಗು ಹಾಗೂ ಕಾಫಿ ಜಿಲ್ಲೆ ಚಿಕ್ಕಮಗಳೂರಿನ ಅಚ್ಚ ಹಸಿರಿನ ಕಾನನದ ಮಧ್ಯೆ ಕಂಗೊಳಿಸುವ ಟೀ ಹಾಗೂ ಕಾಫಿ ತೋಟಗಳ, ಪಕ್ಷಿಗಳ ಕಲರವದ ನಡುವೆ ವಿಶೇಷ ಅನುಭವ ಪಡೆಯಲು ಇಚ್ಛಿಸುವವರು ಟಾಟಾ ಪ್ಲಾಂಟೇಷನ್‌ನ ಈ ಸದಾವಕಾಶ ಪಡೆದುಕೊಳ್ಳಬಹುದು.ಟಾಟಾ ಪ್ಲಾಂಟೇಷನ್ ಸಮೂಹವು ಮಾ.30ರವರೆಗೆ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸಲು ಮುಂದಾಗಿದೆ. ಕೊಡಗು ಹಾಗೂ ಚಿಕ್ಕಮಗಳೂರಿನ ಪ್ಲಾಂಟೇಷನ್‌ಗಳಲ್ಲಿ ರಜೆಯನ್ನು ಕಳೆಯುವ ಮಂದಿಗೆ ಶೇ.10 ರಿಯಾಯಿತಿ ಘೋಷಿಸಿದೆ.ಪ್ರವಾಸಿಗರ ಗುಂಪಿನಲ್ಲಿ ಕಡ್ಡಾಯವಾಗಿ ಒಬ್ಬ ಮಹಿಳೆ ಇರಬೇಕು. ಬೋಟಿಂಗ್, ಗಾಲ್ಫ್, ಟೇಬಲ್ ಟೆನ್ನಿಸ್, ಕುದುರೆ ಸವಾರಿ, ಸಫಾರಿ, ಚಾರಣ, ಸೈಕ್ಲಿಂಗ್, ನೇಚರ್‌ಕ್ಯಾಂಪ್... ಹೀಗೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಜೆಯ ಮಜವನ್ನು ಅನುಭವಿಸಬಹುದು.ಹಳೆಯ ಕಾಲದ ಕಟ್ಟಡಗಳ ಸೌಂದರ್ಯ ಪ್ರವಾಸಿಗರಿಗೆ ಮತ್ತಷ್ಟು ಖುಷಿ ನೀಡಲಿವೆ.  ಬುಕಿಂಗ್ ಹಾಗೂ ಮಾಹಿತಿಗೆ: 23569761, 23560695. ಇಮೇಲ್:

ಟಾಟಾ ಪ್ಲಾಂಟೇಷನ್ ರಿಯಾಯಿತಿಉದ್ಯಾನನಗರಿಯ ಮಂದಿ ಬೇಸಿಗೆ ರಜೆಯನ್ನು ಅನುಭವಿಸಲು ತಮ್ಮ ವೇಳಾಪಟ್ಟಿ ಸಿದ್ಧಪಡಿಸಿಕೊಂಡಿದ್ದರೆ, ಅದನ್ನು ಬದಲಿಸಿಕೊಳ್ಳಬಹುದು. ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಟಾಟಾ ಕಾಫಿ ಪ್ಲಾಂಟೇಷನ್ ಪ್ರವಾಸಿ ಕೇಂದ್ರವು ಮಹಿಳೆಯರಿಗಾಗಿ ವಿಶೇಷ ರಿಯಾಯಿತಿ ಘೋಷಿಸಿದೆ.ಕಿತ್ತಳೆ ನಾಡು ಕೊಡಗು ಹಾಗೂ ಕಾಫಿ ಜಿಲ್ಲೆ ಚಿಕ್ಕಮಗಳೂರಿನ ಅಚ್ಚ ಹಸಿರಿನ ಕಾನನದ ಮಧ್ಯೆ ಕಂಗೊಳಿಸುವ ಟೀ ಹಾಗೂ ಕಾಫಿ ತೋಟಗಳ, ಪಕ್ಷಿಗಳ ಕಲರವದ ನಡುವೆ ವಿಶೇಷ ಅನುಭವ ಪಡೆಯಲು ಇಚ್ಛಿಸುವವರು ಟಾಟಾ ಪ್ಲಾಂಟೇಷನ್‌ನ ಈ ಸದಾವಕಾಶ ಪಡೆದುಕೊಳ್ಳಬಹುದು.ಟಾಟಾ ಪ್ಲಾಂಟೇಷನ್ ಸಮೂಹವು ಮಾ.30ರವರೆಗೆ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸಲು ಮುಂದಾಗಿದೆ. ಕೊಡಗು ಹಾಗೂ ಚಿಕ್ಕಮಗಳೂರಿನ ಪ್ಲಾಂಟೇಷನ್‌ಗಳಲ್ಲಿ ರಜೆಯನ್ನು ಕಳೆಯುವ ಮಂದಿಗೆ ಶೇ.10 ರಿಯಾಯಿತಿ ಘೋಷಿಸಿದೆ.ಪ್ರವಾಸಿಗರ ಗುಂಪಿನಲ್ಲಿ ಕಡ್ಡಾಯವಾಗಿ ಒಬ್ಬ ಮಹಿಳೆ ಇರಬೇಕು. ಬೋಟಿಂಗ್, ಗಾಲ್ಫ್, ಟೇಬಲ್ ಟೆನ್ನಿಸ್, ಕುದುರೆ ಸವಾರಿ, ಸಫಾರಿ, ಚಾರಣ, ಸೈಕ್ಲಿಂಗ್, ನೇಚರ್‌ಕ್ಯಾಂಪ್... ಹೀಗೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಜೆಯ ಮಜವನ್ನು ಅನುಭವಿಸಬಹುದು.ಹಳೆಯ ಕಾಲದ ಕಟ್ಟಡಗಳ ಸೌಂದರ್ಯ ಪ್ರವಾಸಿಗರಿಗೆ ಮತ್ತಷ್ಟು ಖುಷಿ ನೀಡಲಿವೆ.  ಬುಕಿಂಗ್ ಹಾಗೂ ಮಾಹಿತಿಗೆ: 23569761, 23560695. ಇಮೇಲ್:

reach.plantationtrails@tatacoffee.com:Website: www.plantationtrails.net

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.