ಮಂಗಳವಾರ, ಮೇ 24, 2022
30 °C

ಟಾಟಾ ರಿಟೈರ್‌ಮೆಂಟ್ ಸೇವಿಂಗ್ಸ್ ಫಂಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಟಾ ರಿಟೈರ್‌ಮೆಂಟ್ ಸೇವಿಂಗ್ಸ್ ಫಂಡ್

ಬೆಂಗಳೂರು: ಟಾಟಾ ಮ್ಯೂಚುವಲ್ ಫಂಡ್, ನಿವೃತ್ತಿ ಬದುಕಿನ ಹಣಕಾಸು ಅಗತ್ಯ ಪೂರೈಸುವ ನಿರ್ದಿಷ್ಟ ಉದ್ದೇಶದ `ಟಾಟಾ ರಿಟೈರ್‌ಮೆಂಟ್ ಸೇವಿಂಗ್ಸ್ ಫಂಡ್~ ಹೆಸರಿನ ನಿವೃತ್ತಿ ಮ್ಯೂಚುವಲ್ ಫಂಡ್ ಆರಂಭಿಸಿದೆ.

ವಿವಿಧ ವಯೋಮಾನದವರ ಹೂಡಿಕೆ ಅಗತ್ಯಗಳನ್ನು ಈಡೇರಿಸುವ ವಿಶಿಷ್ಟ ಉದ್ದೇಶದಿಂದಲೇ ಈ ಹೂಡಿಕೆ ಯೋಜನೆ ರೂಪಿಸಲಾಗಿದೆ. ಹೂಡಿಕೆದಾರರಿಗೆ ಮೂರು ಬಗೆಯ ಹೂಡಿಕೆ ಅವಕಾಶಗಳು ಇಲ್ಲಿ ಇವೆ. ಪ್ರೊಗ್ರೆಸ್ಸಿವ್ ಪ್ಲ್ಯಾನ್, (45 ವಯಸ್ಸಿನವರಿಗೆ) ಮಾಡರೇಟ್ ಪ್ಲ್ಯಾನ್ (45ರಿಂದ 60) ಮತ್ತು ಕನ್ಸರ್‌ವೇಟಿವ್ (60) ಪ್ಲ್ಯಾನ್‌ಗಳ ಆಯ್ಕೆ ಅವಕಾಶಗಳಿದ್ದು, ಹೂಡಿಕೆದಾರರು ಸ್ವಯಂಚಾಲಿತವಾಗಿ ನಿರ್ದಿಷ್ಟ ಯೋಜನೆಗೆ ವರ್ಗಾವಣೆಗೊಳ್ಳುವ ಸೌಲಭ್ಯ ಇದರಲ್ಲಿ ಇದೆ ಎಂದು ಟಾಟಾ ಅಸೆಟ್ ಮ್ಯಾನೇಜ್‌ಮೆಂಟ್‌ನ ಮಾರುಕಟ್ಟೆ ಮುಖ್ಯಸ್ಥ ಧರ್ಮೇಂದ್ರ ಸತ್ಪತಿ, ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉದ್ಯೋಗನಿರತ ಯುವಕರು ಮತ್ತು ಮಧ್ಯವಯಸ್ಕರ ಹಣ ಹೂಡಿಕೆಯ ಆದ್ಯತೆಗಳನ್ನು ಗಮನದಲ್ಲಿ ಇರಿಸಿಕೊಂಡು ಈ ನಿವೃತ್ತ ಬದುಕಿಗೆ ನೆರವಾಗುವ ಉಳಿತಾಯ ಮ್ಯೂಚುವಲ್ ಫಂಡ್ ರೂಪಿಸಲಾಗಿದೆ.    ಭಾರತೀಯರ ಜೀವಿತಾವಧಿ ಏರಿಕೆಯಾಗುತ್ತಿದ್ದು, ನಿವೃತ್ತಿ ನಂತರದ 30 ವರ್ಷಗಳ ಹಣಕಾಸು ಅಗತ್ಯಗಳನ್ನು  ಪೂರೈಸಿಕೊಳ್ಳಲು ಇಂತಹ ದೀರ್ಘಾವಧಿಯ ಉಳಿತಾಯ ಯೋಜನೆ ತುಂಬ ಪ್ರಯೋಜನಕ್ಕೆ ಬರುತ್ತದೆ.

ಈ ಹೊಸ ಮ್ಯೂಚುವಲ್ ಫಂಡ್‌ನಲ್ಲಿ ಕನಿಷ್ಠ ಹೂಡಿಕೆ ರೂ. 5000ಕ್ಕೆ ನಿಗದಿಪಡಿಸಲಾಗಿದೆ. ಕನಿಷ್ಠ ಮಾಸಿಕ ರೂ.  500ಗಳ ವ್ಯವಸ್ಥಿತ ಹೂಡಿಕೆ ಆಯ್ಕೆಯನ್ನೂ ಕಲ್ಪಿಸಲಾಗಿದೆ. ಈ ಹೊಸ ನಿಧಿಯ ಕೊಡುಗೆಯು (ಎನ್‌ಎಫ್‌ಒ) ಈ ತಿಂಗಳ 21ರವರೆಗೆ ಹೂಡಿಕೆಗೆ ಮುಕ್ತವಾಗಿರುತ್ತದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.