ಮಂಗಳವಾರ, ಮೇ 11, 2021
19 °C
ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್

ಟಾಮಿ, ವಾಂಗ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗಪುರ (ಐಎಎನ್‌ಎಸ್): ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆದ ಶ್ರೇಯಾಂಕ ರಹಿತ ಆಟಗಾರ ಇಂಡೊನೇಷ್ಯಾದ ಟಾಮಿ ಸುಗಿಯರ್ತೊ ಸಿಂಗಪುರ ಓಪನ್ ಸೂಪರ್ ಸರಣಿಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಚೀನಾದ ವಾಂಗ್ ಯಿಹಾನ್ ಪ್ರಶಸ್ತಿ ಜಯಿಸಿದ್ದಾರೆ.ಭಾನುವಾರ ನಡೆದ ಪುರುಷರ ವಿಭಾಗದ ಸಿಂಗಲ್ಸ್‌ನ ಫೈನಲ್‌ನಲ್ಲಿ ಸುಗಿಯರ್ತೊ 20-22, 21-16, 21-17ರಲ್ಲಿ ಥಾಯ್ಲೆಂಡ್‌ನ ಬೂನ್ಸಕ್ ಪೋನ್ಸಾನಗೆ ಆಘಾತ ನೀಡಿದರು. ಪೋನ್ಸಾನ ಹೋದ ವರ್ಷ ಇಲ್ಲಿ ಚಾಂಪಿಯನ್ ಆಗಿದ್ದರು. ಆದರೆ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಅವರಿಗೆ ಈ ಬಾರಿ ಸಾಧ್ಯವಾಗಲಿಲ್ಲ.25 ವರ್ಷ ವಯಸ್ಸಿನ ಸುಗಿಯರ್ತೊ ಮೊದಲ ಗೇಮ್‌ನಲ್ಲಿ ಸೋಲು ಕಂಡರು. ಆದರೆ ನಂತರದ ಎರಡು ಗೇಮ್‌ನಲ್ಲಿ ಮನಮೆಚ್ಚುವಂಥ ಪ್ರದರ್ಶನದ ಮೂಲಕ  ಎದುರಾಳಿಯನ್ನು ಕಂಗೆಡಿಸಿದರು.ಅಗ್ರ ರ‍್ಯಾಂಕ್‌ನ ಆಟಗಾರ ಮಲೇಷ್ಯಾದ ಲೀ ಚೋಂಗ್ ವೀ, ಎರಡನೇ ರ‍್ಯಾಂಕ್‌ನ ಆಟಗಾರ ಚೆನ್ ಲಾಂಗ್ ಹಾಗೂ ಒಲಿಂಪಿಕ್ ಚಾಂಪಿಯನ್ ಲಿನ್ ಡೆನ್ ಸೇರಿದಂತೆ ಪ್ರಮುಖರು ಈ ಬಾರಿಯ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ.ಮಹಿಳೆಯರ ವಿಭಾಗದ ಸಿಂಗಲ್ಸ್ ಫೈನಲ್‌ನಲ್ಲಿ ವಾಂಗ್ 21-18, 21-12ರಲ್ಲಿ ತಮ್ಮ ದೇಶದವರೇ ಆದ ಲೀ ಕ್ಸುಯೆರುಯಿ ಎದುರು ಗೆದ್ದ ಟ್ರೋಫಿ ಎತ್ತಿ ಹಿಡಿದರು. ಒಲಿಂಪಿಕ್ ಚಾಂಪಿಯನ್ ಕ್ಸುಯೆರುಯಿ ಮೊದಲ ಗೇಮ್‌ನಲ್ಲಿ ಮಾತ್ರ ಕೊಂಚ ಪ್ರತಿರೋಧ ತೋರಿದರು. ಆದರೆ ನಂತರದ ಗೇಮ್‌ನಲ್ಲಿ ಸುಲಭವಾಗಿ ಶರಣಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.