ಬುಧವಾರ, ಏಪ್ರಿಲ್ 21, 2021
24 °C

ಟಾಸ್ ಮಹತ್ವದ್ದಾಗಿತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: `ಮೊದಲ ದಿನವೇ ವಿಕೆಟ್ ಪಡೆಯಲು ಪರದಾಡಿದೆವು. ಆದರೆ, ಇಲ್ಲಿನ ಕ್ರೀಡಾಂಗಣದಲ್ಲಿ ಟಾಸ್ ಮಹತ್ವವಾಗಿತ್ತು. ಅದು ನನ್ನ ಕೈಯಲ್ಲಿ ಇರಲಿಲ್ಲ. ಆದರೂ, ನಮ್ಮ ತಂಡದವರು ಉತ್ತಮ ಬೌಲಿಂಗ್ ಮಾಡಿದರು~ ಎಂದು ಕರ್ನಾಟಕ ತಂಡದ ನಾಯಕ ಆರ್. ವಿನಯ್ ಕುಮಾರ್ ಹೇಳಿದರು.`ವಿಕೆಟ್ ಬೀಳಲಿಲ್ಲ ಎನ್ನುವುದಷ್ಟೇ ಬೇಸರದ ಸಂಗತಿ. ಆದರೆ, ಎದುರಾಳಿ ತಮಿಳುನಾಡು ತಂಡಕ್ಕೆ ಹೆಚ್ಚು ರನ್ ಗಳಿಸಲು ಅವಕಾಶ ನೀಡಲಿಲ್ಲ. ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಇನ್ನೂ ಮೂರು ವಿಕೆಟ್ ಪಡೆಯಬೇಕಿತ್ತು. ಆಗ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿತ್ತು~ ಎಂದು ವೇಗಿ ವಿನಯ್ ಅಭಿಪ್ರಾಯಪಟ್ಟರು.ದಿನದಾಟದ ಮುಕ್ತಾಯದ ನಂತರ ಪತ್ರಕರ್ತರ ಜೊತೆ ಮಾತನಾಡಿದ ವಿನಯ್, ಶನಿವಾರ ವಿಕೆಟ್ ಪಡೆಯುವತ್ತ ಮೊದಲು ಗಮನ ನೀಡುತ್ತೇವೆ. ಖಂಡಿತವಾಗಿಯೂ ವಿಶ್ವಾಸವಿದೆ ಎರಡನೇ ದಿನ ನಾವು ಯಶಸ್ಸು ಸಾಧಿಸುತ್ತೇವೆ. ಈ ಪಂದ್ಯದಲ್ಲಿ ಸ್ಪಿನ್ ಬೌಲರ್‌ಗಳು ನಿರ್ಣಾಯಕ ಎಂಬುದನ್ನು ಅಲ್ಲಗೆಳೆಯುವಂತಿಲ್ಲ.ಮೊದಲ ದಿನ ವಿಕೆಟ್ ಪಡೆದಿದ್ದು ಕೂಡಾ ಸ್ಪಿನ್ ಬೌಲರ್‌ಗಳು~ ಎಂದು ನುಡಿದರು.

`ಕೆ.ಪಿ. ಅಪ್ಪಣ್ಣ, ಅಮಿತ್ ವರ್ಮಾ ಕೂಡಾ ತಂಡದ ಪ್ರಮುಖ ಸ್ಪಿನ್ ಶಕ್ತಿಗಳು. ಇವರು ಇಂದು ತಮ್ಮ ಸಾಮರ್ಥ್ಯ ತೋರಿಸಲಿದ್ದಾರೆ. ದಿನದ ಕೊನೆಯಲ್ಲಿ ವಿಕೆಟ್ ಗಿಟ್ಟಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ಮಿಥುನ್ ಮತ್ತು ಸ್ಟುವರ್ಟ್ ಬಿನ್ನಿ ಅವರಿಗೆ ಬೌಲಿಂಗ್ ಮಾಡಲು ಅವಕಾಶ ನೀಡಿದೆ. ಆದರೂ ಪ್ರಯೋಜನವಾಗಲಿಲ್ಲ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.ತಮ್ಮ ತಂಡದವರ ಬೌಲಿಂಗ್ ಬಗ್ಗೆ ಶ್ಲಾಘಿಸುವ ವೇಳೆ ತಮಿಳುನಾಡಿನ ಯುವ ಆಟಗಾರ ಬಾಬಾ ಅಪರಾಜಿತ್ ಬ್ಯಾಟಿಂಗ್ ಬಗ್ಗೆ ಹರ್ಷ ವ್ಯಕ್ತಪಡಿಸುವುದನ್ನು ವಿನಯ್ ಮರೆಯಲಿಲ್ಲ. ಬಾಬಾ ಕೆಲವು ಅತ್ಯುತ್ತಮ ಹೊಡೆತಗಳನ್ನು ಬಾರಿಸಿದರು. ಅವರ ಬ್ಯಾಟಿಂಗ್ ನಿಜಕ್ಕೂ ಅಮೋಘವಾಗಿತ್ತು. ಅದ್ದರಿಂದ ಶನಿವಾರದ ಆಟದಲ್ಲಿ ಮತ್ತೊಂದು ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸುವ ಯೋಜನೆಯಿದೆ ಎಂದು ಮಾತು ಮುಗಿಸಿದರು ವಿನಯ್.ಖುಷಿ ನೀಡಿದ ಆಟ: `ಬಾಬಾ ಜೊತೆಗೆ 50 ಓವರ್‌ಗಳ ಜೊತೆಯಾಟವಾಡಿದ್ದು ಖುಷಿ ನೀಡಿದೆ. ಇದು ಅತ್ಯುತ್ತಮ ಬ್ಯಾಟಿಂಗ್. ಬಾಬಾ ರಣಜಿಯಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದಾಗ ಇನ್ನೊಂದು ಬದಿಯಲ್ಲಿ ನಾನು ಬ್ಯಾಟ್ಸ್‌ಮನ್ ಆಗಿದ್ದೆ ಎನ್ನುವುದು ಖುಷಿ ನೀಡಿದೆ~ ಎಂದು ಎಸ್. ಬದರೀನಾಥ್ ಪ್ರತಿಕ್ರಿಯಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.