ಟಿಂಟಿನ್ ಲಕ್

7

ಟಿಂಟಿನ್ ಲಕ್

Published:
Updated:
ಟಿಂಟಿನ್ ಲಕ್

`ಟಿಂಟಿನ್~ ಬೆಲ್ಜಿಯಂ ಕಲಾವಿದ ಹೆರ್ಗ್ ರೂಪಿಸಿದ ಕಾಮಿಕ್ ಪಾತ್ರ. ವರದಿಗಾರನಾಗಿರುವ ಟಿಂಟಿನ್ ತನ್ನ ನಾಯಿ ಸ್ನೊವಿ ಜೊತೆ ಜಗತ್ತು ಸುತ್ತುತ್ತಾನೆ, ಸಾಹಸಗಳನ್ನು ಮಾಡುತ್ತಾನೆ.

ದಂತ ಮತ್ತು ವಸಡಿನ ಆರೋಗ್ಯ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಕೋಲ್ಗೇಟ್ ಪಾಮೋಲಿವ್, ಸೋನಿ ಪಿಕ್ಚರ್ ಜೊತೆಗೂಡಿ ಈಗ ಟಿಂಟಿನ್ ಅಭಿಮಾನಿಗಳಿಗೆ ಆತನ ಹುಟ್ಟೂರು ಬ್ರಸೆಲ್ಸ್‌ಗೆ ಭೇಟಿ ನೀಡುವ ಅವಕಾಶ ಕಲ್ಪಿಸಿದೆ.ನವೆಂಬರ್ 11ರಂದು ಸ್ಟೀವನ್ ಸ್ಪಿಲ್‌ಬರ್ಗ್ ನಿರ್ದೇಶಿಸಿರುವ ಟಿಂಟಿನ್ ಪಾತ್ರ ಆಧಾರಿತ `ದಿ ಅಡ್ವೆಂಚರ್ಸ್‌ ಆಫ್ ಟಿಂಟಿನ್: ದಿ ಸೀಕ್ರೆಟ್ ಆಫ್ ದಿ ಯುನಿಕಾರ್ನ್~ ಚಿತ್ರ ಬಿಡುಗಡೆ ಸಂದರ್ಭದಲ್ಲಿ `ಕಾಲ್ಗೇಟ್ 360 ಸರೌಂಡ್ ಟೂತ್‌ಬ್ರಶ್; ಫೈಟ್ ಅಗೆನೆಸ್ಟ್ ಇವಿಲ್~ ಎಂಬ ಸ್ಪರ್ಧೆ ಏರ್ಪಡಿಸಿದೆ. ಈ ಸ್ಪರ್ಧೆಯಲ್ಲಿ ವಿಜೇತರಾಗುವ ಗ್ರಾಹಕರು ಟಿಂಟಿನ್ ಕಿಟ್ ಬಹುಮಾನವಾಗಿ ಪಡೆಯುತ್ತಾರೆ. ಮೂರು ಜನ ಅದೃಷ್ಟಶಾಲಿಗಳಿಗೆ ಐದು ದಿನಗಳ ಬ್ರಸೆಲ್ಸ್  ಪ್ರವಾಸದ ಭಾಗ್ಯ.ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಯಸುವವರು `ನಿಮ್ಮ ಬಾಯಿಯಿಂದ ದುಷ್ಟ ಶಕ್ತಿಗಳನ್ನು ಓಡಿಸುವವರು ಯಾರು?~ ಎಂಬ ಸರಳ ಪ್ರಶ್ನೆಗೆ ಉತ್ತರಿಸಿ 53636ಕ್ಕೆ ಎಸ್‌ಎಂಎಸ್ ಕಳುಹಿಸಬೇಕು. ಇಲ್ಲವೇ www.fightagainstevil.co.in ಮೂಲಕ ಹೆಚ್ಚಿನ ವಿವರ ಪಡೆಯಬಹುದು. ಈ ಸ್ಪರ್ಧೆ ನವೆಂಬರ್ 25ರ ವರೆಗೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry