ಬುಧವಾರ, ನವೆಂಬರ್ 20, 2019
21 °C

ಟಿಎಂಸಿ ಸಂಸದ ಭಾಷಣ: ಖಂಡನೆ

Published:
Updated:

ಕೋಲ್ಕತ್ತ(ಐಎಎನ್‌ಎಸ್):  ಪಶ್ಚಿಮ ಬಂಗಾಳ ಮುಖ್ಯಮಂತ್ರಿ  ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರ ಮೇಲೆ ಯಾರಾದರೂ ಹಲ್ಲೆ ಅಥವಾ ದಾಳಿ ಮಾಡಲು ಮುಂದಾದರೆ ಅವರ ಕೈ ಮುರಿಯುವುದಾಗಿ ತೃಣಮೂಲ ಕಾಂಗ್ರೆಸ್ ಸಂಸದ ಮಾಡಿದ ಬೆದರಿಕೆ ಬಗ್ಗೆ ವಿರೋಧ ಪಕ್ಷಗಳು ಟೀಕಿಸಿವೆ.ಹೂಗ್ಲಿ ಜಿಲ್ಲೆಯಲ್ಲಿ ಭಾನುವಾರ ನಡೆದ ಪಕ್ಷದ ಸಭೆಯಲ್ಲಿ ಸಂಸದ ಕಲ್ಯಾಣ ಬಂಡೋಪಾಧ್ಯಾಯ ಮಾತನಾಡಿ, `ನಮ್ಮ ತಾಯಿ ಮತ್ತು ನಾಯಕಿ ಮಮತಾ ಬ್ಯಾನರ್ಜಿ ಅವರ ಮೇಲೆ ಎತ್ತಿದ ಕೈಯನ್ನು ಮುರಿಯುತ್ತೇವೆ' ಎಂದು ಎಚ್ಚರಿಸಿದ್ದರು.

ಪ್ರತಿಕ್ರಿಯಿಸಿ (+)