ಸೋಮವಾರ, ಆಗಸ್ಟ್ 26, 2019
28 °C

ಟಿಟಿ: ಅರ್ಚನಾ ಕಾಮತ್‌ಗೆ ಪ್ರಶಸ್ತಿ

Published:
Updated:

ಬೆಂಗಳೂರು: ಉತ್ತಮ ಪ್ರದರ್ಶನ ತೋರಿದ ಅರ್ಚನಾ ಕಾಮತ್ ಮಲ್ಲೇಶ್ವರಂ ಸಂಸ್ಥೆ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ರಾಜ್ಯ ರಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಯೂತ್ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.ಶನಿವಾರ ನಡೆದ ಫೈನಲ್ ಹಣಾ ಹಣಿಯಲ್ಲಿ ಅರ್ಚನಾ 8-11, 11-6, 4-11, 11-5, 11-5, 11-1ರಲ್ಲಿ ಬಿಎನ್‌ಎಂ ಕ್ಲಬ್‌ನ ಐಶ್ವರ್ಯ ಆರ್. ಬಿದ್ರಿ ಎದುರು ಗೆಲುವು ಸಾಧಿಸಿದರು.ಪುರುಷರ ನಾನ್ ಮೆಡಲಿಸ್ಟ್ ವಿಭಾಗದ ಪ್ರಶಸ್ತಿ ಘಟ್ಟದ ಹೋರಾಟ ದಲ್ಲಿ ದಿನಕರ್ ನಾಯ್ಡು 11-4, 11-7, 11-6ರಲ್ಲಿ ಕಿರಣ್ ಕೆ. ರಾಮ ಎದುರು ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಯೂತ್ ಬಾಲಕರ ವಿಭಾಗದಲ್ಲಿ ಪ್ರಾಬಲ್ಯ ಮೆರೆದ ಬಿಎನ್‌ಎಂ ಕ್ಲಬ್‌ನ ಶ್ರೇಯಲ್ ಕೆ. ತೆಲಾಂಗ್ 11-7, 7-11, 11-8, 11-6, 10-12, 14-12ರಲ್ಲಿ ವಿ. ಪ್ರದೀಪ್ ಅವರನ್ನು ಸೋಲಿಸಿ ಚಾಂಪಿಯನ್ ಎನಿಸಿದರು.ಡಬಲ್ಸ್‌ನಲ್ಲೂ ಪ್ರಶಸ್ತಿ: ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಶ್ರೇಯಲ್ ಜೂನಿಯರ್ ಡಬಲ್ಸ್ ವಿಭಾಗದಲ್ಲೂ ಸಾಮರ್ಥ್ಯ ಮೆರೆದರು. ಫೈನಲ್‌ನಲ್ಲಿ ಜಿ. ಕಿರಣ್ ಜೊತೆಗೂಡಿ ಆಡಿದ ಶ್ರೇಯಲ್ 11-3, 11-8, 11-8ರಲ್ಲಿ ಸುಚಿತ್ ಪಿ. ಶೆಣೈ-ಆರ್.ಬಿ. ರಕ್ಷಿತ್ ಎದುರು ಗೆಲುವು ಸಾಧಿಸಿದರು.

ಬಾಲಕಿಯರ ಡಬಲ್ಸ್‌ನಲ್ಲಿ ಸೇಜಲ್ ಕೌಶಿಕ್-ಎಂ.ವಿ.ಸ್ಫೂರ್ತಿ ಜೋಡಿ 11-4, 11-3, 5-11, 11-6ರಲ್ಲಿ ಅರ್ಚನಾ ಕಾಮತ್ - ವಿ. ಖುಷಿ ಎದುರು ಜಯ ಪಡೆದು ಪ್ರಶಸ್ತಿ ತಮ್ಮದಾಗಿಸಿಕೊಂಡರು.

Post Comments (+)