ಟಿಟಿ: ಕ್ವಾರ್ಟರ್ ಫೈನಲ್‌ಗೆ ಭಾರತ

7

ಟಿಟಿ: ಕ್ವಾರ್ಟರ್ ಫೈನಲ್‌ಗೆ ಭಾರತ

Published:
Updated:

ಮಕಾವು (ಪಿಟಿಐ): ರಾಷ್ಟ್ರೀಯ ಚಾಂಪಿಯನ್ ಪೌಲಮಿ ಘಾಟಕ್ ತೋರಿದ ಉತ್ತಮ ಪ್ರದರ್ಶನದ ನೆರವಿನಿಂದ ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ಭಾರತ 3-0ರಲ್ಲಿ ಥಾಯ್ಲೆಂಡ್ ತಂಡವನ್ನು ಮಣಿಸಿತು. ಮೊದಲ ಪಂದ್ಯದಲ್ಲಿ ಮೌಮಾ ದಾಸ್ 11-9, 11-7, 12-10ರಲ್ಲಿ ಅನಿ ಸರಾ ಮಾಂಗ್‌ಸುಕ್ ಅವರನ್ನು ಸೋಲಿಸಿದರು. ಬಳಿಕ ಪೌಲಮಿ 11-4, 14-12, 11-6ರಲ್ಲಿ ನಂತನಾ ಕೋಮ್ವಾಂಗ್ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ಭಾರತಕ್ಕೆ 2-0 ಮುನ್ನಡೆ ಲಭಿಸಿತು. ಮೂರನೇ ಪಂದ್ಯದಲ್ಲಿ ಅಂಕಿತಾ ದಾಸ್ 14-12, 11-5, 10-12, 11-5ರಲ್ಲಿ ಸುಟ್ಲಕ್ಸ್ ಎದುರು ಗೆದ್ದರು.

ಪುರುಷರ ವಿಭಾಗದಲ್ಲೂ ಭಾರತ ತಂಡ ಎಂಟರ ಘಟ್ಟ ಪ್ರವೇಶಿಸಿದೆ. ಎರಡನೇ ಸುತ್ತಿನಲ್ಲಿ ಈ ತಂಡದವರು 3-2ರಲ್ಲಿ ಇರಾನ್‌ಗೆ ಆಘಾತ ನೀಡಿದರು. ಮೊದಲ ಪಂದ್ಯದಲ್ಲಿ ಸೌಮ್ಯಜಿತ್ ಘೋಷ್ 7-11, 5-11, 9-11ರಲ್ಲಿ ನೋಶದ್ ಅಲಾಮಿಯನ್ ಎದುರು ಸೋಲು ಕಂಡರು. ಆದರೆ ಅಚಂತ ಶರತ್ ಕಮಲ್ 11-5, 16-14, 11-3ರಲ್ಲಿ ಮೊಹಮ್ಮದ್ ರೇಜಾ ಎದುರು ಗೆದ್ದರು. ಮೂರನೇ ಪಂದ್ಯದಲ್ಲಿ ರಾಷ್ಟ್ರೀಯ ಚಾಂಪಿಯನ್ ಎ.ಅಮಲ್‌ರಾಜ್ 11-8, 7-11, 11-8, 11-6ರಲ್ಲಿ ಅಲಾಮಿಯನ್ ನೋಶದ್ ಅವರನ್ನು ಸೋಲಿಸಿದರು. ಆದರೆ ರಿವರ್ಸ್ ಪಂದ್ಯದಲ್ಲಿ ಅಚಂತ್ 11-7, 9-11, 10-12, 6-11ರಲ್ಲಿ ಅಲಾಮಿಯನ್ ನೋಶದ ಎದುರು ಪರಾಭವಗೊಂಡರು. ನಿರ್ಣಾಯಕ ರಿವರ್ಸ್ ಪಂದ್ಯದಲ್ಲಿ ಅಮಲ್‌ರಾಜ್ 11-8, 11-9, 11-4ರಲ್ಲಿ ಮೊಹಮ್ಮದ್ ರೇಜಾ ಎದುರು ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry