ಸೋಮವಾರ, ಮೇ 10, 2021
25 °C

ಟಿಟಿ: ಗೌರವ್, ಐಶ್ವರ್ಯಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರಂಭದಲ್ಲಿ ಸಂಕಷ್ಟ ಎದುರಾದರೂ ವಿಶ್ವಾಸದಿಂದಲೇ ಉತ್ತಮ ಪ್ರದರ್ಶನ ನೀಡಿದ ಬಿಎನ್‌ಎಮ್‌ನ ಗೌರವ್ ಪುರಿ ಹಾಗೂ ಎಸ್‌ಟಿಎಆರ್‌ನ ಎನ್. ಐಶ್ವರ್ಯ ಅವರು ಜಯನಗರ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಟಿವಿಎಸ್ ವೇಗೊ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ಸಬ್ ಜೂನಿಯರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.



ಇಲ್ಲಿನ ದ ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯ ಡಾ. ರಾಜೇಂದ್ರ ಪ್ರಸಾದ್ ಸಭಾಂಗಣದಲ್ಲಿ ಭಾನುವಾರ ನಡೆದ ಸಬ್ ಜೂನಿಯರ್ ವಿಭಾಗದ ಫೈನಲ್ ಪಂದ್ಯದಲ್ಲಿ  ಗೌರವ್ 3-11, 11-5, 6-11, 11-8, 11-3ರಲ್ಲಿ ಎಚ್‌ಒಆರ್‌ನ ಆರ್. ಸಮಂತ್ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದರು.



ಆರಂಭದಲ್ಲಿ ಸಂಕಷ್ಟ ಅನುಭವಿಸಿದ ಗೌರವ್ ನಂತರ ಚುರುಕಿನ ಆಟವಾಡಿದರು. ಮೊದಲ ಗೇಮ್‌ನಲ್ಲಿ ಸೋಲು ಕಂಡು ನಂತರ ಗೆಲುವು ಪಡೆದರು. ಆದರೆ ಮೂರನೇ ಗೇಮ್‌ನಲ್ಲಿ ಮತ್ತೆ ನಿರಾಸೆ. ನಂತರದ ಎರಡೂ ಗೇಮ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆದರು.



ಇದಕ್ಕೂ ಮುನ್ನ ನಡೆದ ಬಾಲಕರ ವಿಭಾಗದ ಸೆಮಿಫೈನಲ್‌ನಲ್ಲಿ ಸಮಂತ್ 8-11, 11-6, 9-11, 11-8, 11-7ರಲ್ಲಿ ಆದಿತ್ಯ ಅರವಿಂದ್ ಮೇಲೂ, ಗೌರವ್ 11-6, 8-11, 5-11, 11-2, 11-9ರಲ್ಲಿ ಶ್ರೇಯಲ್ ಕುಲಕರ್ಣಿ ವಿರುದ್ಧವೂ ಗೆಲುವು ಪಡೆದು ಫೈನಲ್ ಪ್ರವೇಶಿಸಿದ್ದರು.



ಐಶ್ವರ್ಯಗೆ ಪ್ರಶಸ್ತಿ: ಎನ್. ಐಶ್ವರ್ಯ ಸಬ್ ಜೂನಿಯರ್ ಬಾಲಕಿಯರ ವಿಭಾಗದ ಫೈನಲ್ ಪಂದ್ಯದಲ್ಲಿ 11-5, 11-5, 11-6ರಲ್ಲಿ ಎಚ್‌ಒಆರ್‌ನ ಮೇದಿನಿ ಆರ್. ಭಟ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.



ಬಾಲಕಿಯರ ವಿಭಾಗದ ಸೆಮಿಫೈನಲ್ ಪಂದ್ಯಗಳಲ್ಲಿ ಐಶ್ವರ್ಯ 11-3, 11-13, 11-8, 11-9ರಲ್ಲಿ ಎಂ.ವಿ. ಸ್ಪೂರ್ತಿ ಮೇಲೂ, ಮೇದಿನಿ ಆರ್. ಭಟ್ 11-5, 11-5, 11-6ರಲ್ಲಿ ಪ್ರಿಯಾ ರಾವ್ ವಿರುದ್ಧವೂ ಗೆಲುವು ಪಡೆದು ಅಂತಿಮ ಘಟ್ಟಕ್ಕೆ ಪ್ರವೇಶ ಪಡೆದಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.