ಮಂಗಳವಾರ, ಮೇ 18, 2021
30 °C

ಟಿಟಿ: ಚೀನಾಕ್ಕೆ ತೆರಳಿದ ಭಾರತ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಇತ್ತೀಚಿನ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಭಾರತ ಟೇಬಲ್ ಟೆನಿಸ್ ತಂಡ ಚೀನಾ ಓಪನ್ ಸೂಪರ್ ಸರಣಿ ಟಿಟಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಚೀನಾಕ್ಕೆ ತೆರಳಿದೆ.ಜೂನ್ 12ರಂದು (ಬುಧವಾರ) ಆರಂಭವಾದ ಟೂರ್ನಿ 16ರ ವರೆಗೆ ನಡೆಯಲಿದೆ. ಕಳೆದ ತಿಂಗಳು ನಡೆದ ಕಾಮನ್‌ವೆಲ್ತ್ ಟೇಬಲ್ ಟೆನಿಸ್ ಚಾಂಪಿಯ್‌ಷಿಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿತ್ತು. ಈ ಟೂರ್ನಿಯಲ್ಲಿ ಭಾರತ ಎರಡು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳನ್ನು ಜಯಿಸಿತ್ತು.`ಭಾರತದ ಪುರುಷರ ತಂಡದಲ್ಲಿ ಅಚಂತಾ ಶರತ್ ಕಮಲ್, ಅಂಥೋನಿ ಅಮಲ್‌ರಾಜ್, ಸೌಮ್ಯಜಿತ್  ಘೋಷ್, ಸನಿಲ್ ಶೆಟ್ಟಿ ಮತ್ತು ಹರ್ಮಿತ್ ದೇಸಾಯಿ ಹಾಗೂ ಮಹಿಳೆಯರ ತಂಡದಲ್ಲಿ ಕುಮಾರಸೇನ್ ಶಾಮಿನಿ, ಮಾಧುರಿಕಾ ಪಾಟ್ಕರ್, ಮೌಮಾ ದಾಸ್, ನೇಹಾ  ಅಗರ್‌ವಾಲ್ ಹಾಗೂ ಅಂಕಿತಾ ದಾಸ್ ಅವರು ಸ್ಥಾನ ಗಳಿಸಿದ್ದಾರೆ' ಎಂದು ಭಾರತ ಟೇಬಲ್ ಟೆನಿಸ್ ಫೆಡರೇಷನ್ ತಿಳಿಸಿದೆ.ವಿಶ್ವ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಅಚಂತಾ ಶರತ್ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲು ಕಂಡಿದ್ದರು. ಮಿಶ್ರ ಡಬಲ್ಸ್‌ನ ಸ್ಪರ್ಧೆಯಲ್ಲಿ ಸೌಮ್ಯಜಿತ್ ಘೋಷ್ ಮತ್ತು ಮೌಮಾ ದಾಸ್ ಜೋಡಿ ಆರಂಭದಲ್ಲಿಯೇ ಸೋಲು ಕಂಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.