ಟಿಟಿ: ಮೈತ್ರೇಯಿಗೆ ಪ್ರಶಸ್ತಿ ಡಬಲ್

7

ಟಿಟಿ: ಮೈತ್ರೇಯಿಗೆ ಪ್ರಶಸ್ತಿ ಡಬಲ್

Published:
Updated:

ಹುಬ್ಬಳ್ಳಿ: ಭರವಸೆಯ ಆಟಗಾರ್ತಿ ಮೈತ್ರೇಯಿ ಬೈಲೂರು ಅವರು ನಗರದ ಡಾ. ಕೆ.ಎಸ್. ಶರ್ಮಾ ಸಭಾಗೃಹದಲ್ಲಿ ನಡೆಯುತ್ತಿರುವ ಸಂಜಯ್ ಪೈ ಸ್ಮಾರಕ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಶನಿವಾರ ಬಾಲಕಿಯರ ಜೂನಿಯರ್ ಹಾಗೂ ಯೂತ್ ವಿಭಾಗಗಳೆರಡರಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದರು. ಬಾಲಕರ ಜೂನಿಯರ್ ವಿಭಾಗದಲ್ಲಿ ಹೊರೈಜನ್ ಕ್ಲಬ್‌ನ ಸುನಂದ್ ವಾಸನ್ ಹಾಗೂ ಯೂತ್ ವಿಭಾಗದಲ್ಲಿ  ಬಿಎನ್‌ಎಂನ ಶ್ರೇಯಾಲ್ ಕೆ. ತೇಲಂಗ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.ಹುಬ್ಬಳ್ಳಿ ಟೇಬಲ್ ಟೆನಿಸ್ ಸಂಸ್ಥೆ ಹಾಗೂ ಮಹಾರಾಷ್ಟ್ರ ಮಂಡಲ ಜಂಟಿಯಾಗಿ ಸಂಘಟಿಸಿರುವ ಟೂರ್ನಿಯ ಬಾಲಕಿಯರ ಜೂನಿಯರ್ ವಿಭಾಗದ ಫೈನಲ್‌ನಲ್ಲಿ ಬಿಟಿಟಿಎನ ಮೈತ್ರೇಯಿ 7-11, 10-12, 8-11, 11-2, 12-10, 11-5, 11-2 ಅಂತರದಲ್ಲಿ ಟೂರ್ನಿಯ ಅಗ್ರ ಶ್ರೇಯಾಂಕದ ಆಟಗಾರ್ತಿ, ಮೈಸೂರಿನ ಹರ್ಷಾ ಟೇಬಲ್ ಟೆನಿಸ್ ಅಸೋಸಿಯೇಶನ್‌ನ ರಿಧಿ ರೋಹಿತ್‌ರನ್ನು ಮಣಿಸಿದರು.ಮೊದಲ ಮೂರು ಗೇಮ್‌ಗಳಲ್ಲಿ ಹಿನ್ನಡೆ ಅನುಭವಿಸಿದ ಮೈತ್ರೇಯಿ ನಂತರ ಪುಟಿದೆದ್ದು ಪಂದ್ಯ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಮೈತ್ರೇಯಿ 11-4, 11-5, 11-3, 11-7ರಿಂದ ಎಂಎಂನ ಸಹನಾ ಕುಲಕರ್ಣಿ ಅವರನ್ನೂ, ರಿಧಿ 11-9, 11-6, 11-7, 3-11, 11-8ರಿಂದ ಪಿಟಿಟಿಎನ ಸ್ಫೂರ್ತಿ ಅವರನ್ನೂ ಮಣಿಸಿದರು.ಯೂತ್ ವಿಭಾಗದ ಫೈನಲ್‌ನಲ್ಲಿ ಸಹ ಮೈತ್ರೇಯಿ ಹಾಗೂ ರಿಧಿ ಮುಖಾಮುಖಿಯಾದರು. ಮೈತ್ರೇಯಿ 11-5, 14-12, 11-4, 11-6ರಿಂದ ಸುಲಭ ಗೆಲುವು ದಾಖಲಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ರಿಧಿ 5-11, 11-8, 10-12, 11-6, 11-8, 14-12ರಿಂದ ಸಹನಾ ಕುಲಕರ್ಣಿ ವಿರುದ್ಧ ಹಾಗೂ ಮೈತ್ರೇಯಿ 11-5, 11-3, 11-6, 11-6 ಅಂತರದಿಂದ ಕೆ.ಎಸ್. ಹರಿಪ್ರಿಯಾ ಅವರನ್ನು ಪರಾಭವಗೊಳಿಸಿದರು.ಸುನಂದ್‌ಗೆ ಗೆಲುವು: ಬಾಲಕರ ಜೂನಿಯರ್ ವಿಭಾಗದ ಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಆಟಗಾರ ಸುನಂದ್ ವಾಸನ್ 4-11, 7-11, 11-9, 11-5, 11-6, 11-7ರಿಂದ ಅಗ್ರ ಶ್ರೇಯಾಂಕದ ಆಟಗಾರ ಬಿಎನ್‌ಎಂನ ಶ್ರೇಯಾಲ್ ಕೆ. ತೇಲಂಗ್ ಅವರನ್ನು ಮಣಿಸಿದರು.ಬಾಲಕರ ಯೂತ್ ವಿಭಾಗದ ಫೈನಲ್‌ನಲ್ಲಿ ಬಿಎನ್‌ಎಂನ ಶ್ರೇಯಾಲ್ ಕೆ. ತೇಲಂಗ್ 16-14, 8-11, 11-8, 6-11, 11-19, 12-10 ಅಂತರದಿಂದ ತಮ್ಮ ಕ್ಲಬ್‌ನವರೇ ಆದ ವಿ. ಪ್ರದೀಪ್‌ರನ್ನು ಮಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry