ಶನಿವಾರ, ಫೆಬ್ರವರಿ 27, 2021
31 °C

ಟಿಟಿ: ರಕ್ಷಿತ್‌, ಸ್ಫೂರ್ತಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಿಟಿ: ರಕ್ಷಿತ್‌, ಸ್ಫೂರ್ತಿಗೆ ಪ್ರಶಸ್ತಿ

ಬೆಂಗಳೂರು: ಆಕರ್ಷಕ ಆಟ ಆಡಿದ ಆರ್‌.ಬಿ. ರಕ್ಷಿತ್‌ ಮತ್ತು ಎಂ.ವಿ.ಸ್ಫೂರ್ತಿ ಕೆನರಾ ಯೂನಿಯನ್‌ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯ ಜೂನಿ ಯರ್‌ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ ಆದರು.

ಪ್ರಕಾಶ್‌ ಕೋರ್ಟ್‌ನಲ್ಲಿ ಭಾನುವಾರ ನಡೆದ ಬಾಲಕರ ಸಿಂಗಲ್ಸ್‌ ವಿಭಾಗದ ಫೈನಲ್‌ ಹೋರಾಟದಲ್ಲಿ ರಕ್ಷಿತ್‌ 6–11, 11–4, 11–4, 11–9, 11–6ರಲ್ಲಿ ಕೌಸ್ತುಬ್‌ ಕುಲಕರ್ಣಿ ಅವರನ್ನು ಮಣಿಸಿದರು.ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್‌ ಹಣಾಹಣಿಗಳಲ್ಲಿ ರಕ್ಷಿತ್‌ 11–4, 11–6, 14–12, 7–11, 11–3ರಲ್ಲಿ ನಿಖಿಲ್‌ ನಂದಾ ಎದುರೂ, ಕೌಸ್ತುಬ್‌ 11–5, 13–11, 10–12, 11–7, 12–14, 13–11ರಲ್ಲಿ ಜಿ.ಎಸ್‌. ಸಂಕೇತ್‌ ವಿರುದ್ಧವೂ ಗೆದ್ದು ಫೈನಲ್‌ ಪ್ರವೇಶಿಸಿದ್ದರು.ಸ್ಫೂರ್ತಿಗೆ ಕಿರೀಟ: ಬಾಲಕಿಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಎಂ.ವಿ. ಸ್ಫೂರ್ತಿ 12–14, 11–5, 8–11, 11–4, 11–8, 6–11, 11–4ರಲ್ಲಿ ಎ. ಸಂಯುಕ್ತಾ ಎದುರು ಗೆಲುವಿನ  ನಗೆ ಚೆಲ್ಲಿದರು. ಇದಕ್ಕೂ ಮೊದಲು ನಡೆದ ನಾಲ್ಕರ ಘಟ್ಟದ ಹೋರಾಟಗಳಲ್ಲಿ ಸ್ಫೂರ್ತಿ 13–11, 11–6, 11–6, 11–8ರಲ್ಲಿ ಗಾಯತ್ರಿ ಟಂಕಸಾಲಿ ಎದುರೂ, ಸಂಯುಕ್ತಾ 8–11, 9–11, 11–4, 11–4, 11–7, 11–3ರಲ್ಲಿ ಕೌಮುದಿ ಪಟ್ನಾಕರ್‌ ವಿರುದ್ಧವೂ ವಿಜಯಿಯಾಗಿದ್ದರು.ಬಾಲಕರ ವಿಭಾಗದ ಕ್ವಾರ್ಟರ್ ಫೈನಲ್‌ ಹೋರಾಟಗಳಲ್ಲಿ ರಕ್ಷಿತ್‌ 8–11, 12–10, 11–7, 11–5, 9–11, 11–4 ರಲ್ಲಿ ರೋಹನ್‌ ಜಮದಗ್ನಿ ಎದುರೂ, ಸಂಕೇತ್‌ 11–2, 11–8, 12–10, 11–8 ರಲ್ಲಿ ಅಭಿಜಿತ್‌ ಸರಳಾಯ ಮೇಲೂ, ವಿರುದ್ಧವೂ ಗೆಲುವು ಪಡೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.