ಟಿಟಿ: ವಯೋಮಿತಿಯಲ್ಲಿ ಬದಲಾವಣೆ

7

ಟಿಟಿ: ವಯೋಮಿತಿಯಲ್ಲಿ ಬದಲಾವಣೆ

Published:
Updated:

ಬೆಂಗಳೂರು: ರಾಷ್ಟ್ರೀಯ, ವಲಯ ಮಟ್ಟ ಹಾಗೂ ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಳ್ಳಲಿರುವ ಸ್ಪರ್ಧಿಗಳ ವಯೋಮಿತಿಯಲ್ಲಿ ಭಾರತ ಟೇಬಲ್ ಟೆನಿಸ್ ಫೆಡರೇಷನ್ ಬದಲಾವಣೆ ಮಾಡಿದೆ.ಸಬ್ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸುವವರು 15 ವರ್ಷ (ಮೊದಲು 14 ವರ್ಷ) ಹಾಗೂ ಜೂನಿಯರ್ ವಿಭಾಗದಲ್ಲಿ 18 ವರ್ಷದೊಳಗಿನವರಾಗಿಬೇಕು (ಮೊದಲು 17 ವರ್ಷ) ಎಂದು  ಫೆಡರೇಷನ್ ತಿಳಿಸಿದೆ.ಅಂತರರಾಷ್ಟ್ರೀಯ ಟಿ.ಟಿ. ಫೆಡರೇಷನ್ ಮೊದಲಿನಿಂದಲೂ ಈ ವಯೋಮಿತಿಯನ್ನು ಅಳವಡಿಸಿಕೊಂಡಿದೆ. ಆದರೆ, ಭಾರತ ಇದೀಗ ಈ ಬದಲಾವಣೆ ಮಾಡಿದೆ. ಈ ಕುರಿತು ಎಲ್ಲಾ ಜಿಲ್ಲಾ ಕೇಂದ್ರಗಳ ಟಿಟಿ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ಕರ್ನಾಟಕ ಟಿ.ಟಿ. ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಎಸ್. ವಸಂತ್ ಕುಮಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry