ಟಿಟಿ: ವಿಕ್ರಮಾದಿತ್ಯ ಚಾಂಪಿಯನ್

7

ಟಿಟಿ: ವಿಕ್ರಮಾದಿತ್ಯ ಚಾಂಪಿಯನ್

Published:
Updated:
ಟಿಟಿ: ವಿಕ್ರಮಾದಿತ್ಯ ಚಾಂಪಿಯನ್

ಬೆಂಗಳೂರು: ಬಿಎನ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಕ್ರಮಾದಿತ್ಯ ಇಲ್ಲಿ ನಡೆದ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ನಾನ್-ಮೆಡಲಿಸ್ಟ್ ವಿಭಾಗದ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.ಕರ್ನಾಟಕದ ಎಂಜಿನಿಯರ್ಸ್ ಅಕಾಡೆಮಿಯಲ್ಲಿ ಶುಕ್ರವಾರ ನಡೆದ ಫೈನಲ್‌ನಲ್ಲಿ ವಿಕ್ರಮಾದಿತ್ಯ 11-3, 15-13, 11-6ರಲ್ಲಿ ಗೋಪಾಲನ್ ಸ್ಪೋರ್ಟ್ಸ್ ಸೆಂಟರ್‌ನ ಪ್ರಣವ್ ವರ್ಮ ಅವರನ್ನು ಸೋಲಿಸಿದರು.ಮೊದಲ ಹಾಗೂ ಮೂರನೇ ಗೇಮ್‌ಗಳನ್ನು ವಿಕ್ರಮಾದಿತ್ಯ ಸುಲಭವಾಗಿ ಜಯಿಸಿದರು. ಎರಡನೇ ಗೇಮ್‌ನಲ್ಲಿ ಮಾತ್ರ ಕೊಂಚ ಪ್ರತಿರೋಧ ಎದುರಾಯಿತು.ಚೆಂಡನ್ನು ಆಕರ್ಷಕವಾಗಿ ಸ್ಪಿನ್ ಮಾಡಿ ಟೇಬಲ್ ಅಂಚಿಗೆ ಅಪ್ಪಳಿಸುವಲ್ಲಿ ವಿಕ್ರಮಾದಿತ್ಯ ಅವರು ಪ್ರಭಾವಿ ಎನಿಸಿದರು.  ಆದ್ದರಿಂದ ಎದುರಾಳಿ ಗೋಪಾಲನ್ ಅವರು ಸಾಕಷ್ಟು ಪ್ರಯಾಸ ಪಡಬೇಕಾಯಿತು.ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ವಿಕ್ರಮಾದಿತ್ಯ 7-11, 11-9, 11-7, 11-7ರಲ್ಲಿ ಮಂಜುನಾಥ್ ರಾಠೋಡ್ ಎದುರೂ, ಪ್ರಣವ್ ವರ್ಮ 5-11, 11-8, 11-6, 11-8ರಲ್ಲಿ ಆರ್.ರಚಿತ್ ವಿರುದ್ಧವೂ ಗೆಲುವು ಸಾಧಿಸಿದ್ದರು.ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಮಂಜುನಾಥ್ ರಾಠೋಡ್ 11-7, 11-8, 11-7ರಲ್ಲಿ ಎ.ಧವನ್ ಎದುರೂ, ವಿಕ್ರಮಾದಿತ್ಯ 10-12, 14-12, 11-9. 7-11, 13-11ರಲ್ಲಿ ದಿನೇಶ್ ರಾವ್ ವಿರುದ್ಧವೂ, ಆರ್.ರಂಚಿತ್ 11-9, 11-7, 11-9ರಲ್ಲಿ ರಾಹುಲ್ ಮೇಲೂ, ಪ್ರಣವ್ ವರ್ಮ 11-6, 5-11,7-11, 11-4, 11-6ರಲ್ಲಿ ನಿತಿನ್ ಎದುರು ಜಯ ಗಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry