ಶನಿವಾರ, ನವೆಂಬರ್ 23, 2019
17 °C

ಟಿಟಿ: ಶರತ್, ಶಾಮಿನಿಗೆ ಸೋಲು

Published:
Updated:

ನವದೆಹಲಿ (ಪಿಟಿಐ): ಭಾರತದ ಅಚಂತ ಶರತ್ ಕಮಲ್ ಹಾಗೂ ಕೆ. ಶಾಮಿನಿ ಹಾಂಕಾಂಗ್‌ನಲ್ಲಿ ನಡೆದ 26ನೇ ಏಷ್ಯನ್ ಕಪ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ `ಪ್ಲೇ ಆಫ್' ಪಂದ್ಯದಲ್ಲಿ ನಿರಾಸೆ ಅನುಭವಿಸಿದರು.ಕ್ವೀನ್ ಎಲಿಜಬೆತ್ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಶರತ್ ಕಮಲ್ 11-13, 11-7, 11-5, 1-11, 8-11, 7-11ರಲ್ಲಿ ಆತಿಥೇಯ ರಾಷ್ಟ್ರದ ಟಾಂಗ್ ಪೆಂಗ್ ಎದುರು ಸೋಲು ಕಂಡರು. ಗುಂಪು ಹಂತದ ಪಂದ್ಯದಲ್ಲಿ ಭಾರತದ ಆಟಗಾರ 4-1ರಲ್ಲಿ ಇರಾನ್‌ನ ಅಲಮಿಯಾನ್ ನಿಮಾ ಎದುರು ಸುಲಭ ಗೆಲುವು ಪಡೆದು `ಪ್ಲೇ ಆಫ್' ಹಂತ ಪ್ರವೇಶಿಸಿದ್ದರು.ಮಹಿಳಾ ವಿಭಾಗದ ಗುಂಪು ಹಂತದ ಮೊದಲ ಪಂದ್ಯದಲ್ಲಿ ಶಾಮಿನಿ 11-6, 11-7, 11-7, 11-87ರಲ್ಲಿ ಕತಾರ್‌ನ ಮಹಮ್ಮದ್ ಆಯಿ ಎದುರು ಗೆಲುವು ಸಾಧಿಸಿದ್ದರು. ಆದರೆ, ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿದರು.

ಥಾಯ್ಲೆಂಡ್‌ನ ನಂತನಾ ಕೊಮ್‌ವಾಂಗ್ 11-9, 11-6, 11-6, 9-11, 11-5ರಲ್ಲಿ ಭಾರತದ ಆಟಗಾರ್ತಿಗೆ ಸೋಲುಣಿಸಿದರು.

ಪ್ರತಿಕ್ರಿಯಿಸಿ (+)