ಟಿಟಿ: ಶ್ರೇಯಲ್, ಸ್ಫೂರ್ತಿಗೆ ಪ್ರಶಸ್ತಿ

7

ಟಿಟಿ: ಶ್ರೇಯಲ್, ಸ್ಫೂರ್ತಿಗೆ ಪ್ರಶಸ್ತಿ

Published:
Updated:

ಬೆಂಗಳೂರು: ಶ್ರೇಯಲ್ ಕೆ. ತೆಲಾಂಗ್ ಮತ್ತು ಎಂ.ವಿ. ಸ್ಫೂರ್ತಿ ಅವರು ಇಲ್ಲಿ ನಡೆದ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.ಇಂಡಿಯನ್ ಜಿಮ್ಖಾನಾದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಬಿಎನ್‌ಎಂನ ಶ್ರೇಯಲ್ 11-9, 12-10, 6-11, 7-11, 11-9, 3-11, 13-11 ರಲ್ಲಿ ಎಜಿಒಆರ್‌ಸಿಯ ಅರ್ಪಿತ್ ವಿರುದ್ಧ ಗೆಲುವು ಪಡೆದರು.ಪಿಟಿಟಿಎಯ ಸ್ಫೂರ್ತಿ ಫೈನಲ್‌ನಲ್ಲಿ 11-8, 14-12, 11-9, 8-11, 10-12, 14-12 ರಲ್ಲಿ ಬಿಎನ್‌ಎಂನ ಐಶ್ವರ್ಯಾ ಬಿದ್ರಿ ಅವರನ್ನು ಮಣಿಸಿದರು.

ಸುನಂದ್ ವಾಸನ್ ಹಾಗೂ ಮೈತ್ರೇಯಿ ಬೈಲೂರು ಅವರು ಕ್ರಮವಾಗಿ ಯೂತ್ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.ಯೂತ್ ಬಾಲಕರ ಫೈನಲ್‌ನಲ್ಲಿ ಬಿಎನ್‌ಎಂನ ಸುನಂದ್ 11-9, 11-8, 4-11, 7-11, 14-12, 11-5 ರಲ್ಲಿ ಶ್ರೇಯಲ್ ವಿರುದ್ಧ ಪ್ರಯಾಸದ ಗೆಲುವು ಪಡೆದರೆ, ಬಿಟಿಟಿಎಯ ಮೈತ್ರೇಯಿ 11-5, 11-8, 5-11, 11-6, 11-8 ರಲ್ಲಿ ಬಿ.ಎಸ್. ಅರ್ಪಿತಾ ಅವರನ್ನು ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry