ಟಿವಿಎಸ್ `ಫೀನಿಕ್ಸ್' ಮಾರುಕಟ್ಟೆಗೆ

7

ಟಿವಿಎಸ್ `ಫೀನಿಕ್ಸ್' ಮಾರುಕಟ್ಟೆಗೆ

Published:
Updated:

ಬೆಂಗಳೂರು: ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಟಿವಿಎಸ್ ಮೋಟಾರ್ ಮಂಗಳವಾರ ಇಲ್ಲಿ ರಾಜ್ಯ ಮಾರುಕಟ್ಟೆಗೆ 125 ಸಿಸಿ ಸಾಮರ್ಥ್ಯದ ಹೊಸ ಬೈಕ್ `ಫೀನಿಕ್ಸ್' ಬಿಡುಗಡೆ ಮಾಡಿದೆ.ವೇಗದ ಸವಾರಿಯೂ ಬೇಕು, ಇಂಧನ ಮಿತವ್ಯಯವೂ ಇರಬೇಕು ಎನ್ನುವವರಿಗೆ ಫೀನಿಕ್ಸ್ ಉತ್ತಮ ಆಯ್ಕೆ.ಡಿಜಿಟಲ್ ಸ್ಫೀಡೊಮೀಟರ್, ಟ್ರಿಪ್ ಮೀಟರ್,  ಸರ್ವೀಸ್ ರಿಮೈಂಡರ್, ಹಜಾರ್ಡ್ ಲ್ಯಾಂಪ್ ಸೇರಿದಂತೆ  125ಸಿ.ಸಿ ಸಾಮರ್ಥ್ಯದ ಇತರೆ ಬೈಕ್‌ಗಳಲ್ಲಿ ಇಲ್ಲದಿರುವ ಹಲವು ವಿಶೇಷತೆಗಳು ಇದರಲ್ಲಿವೆ ಎಂದು ಟಿವಿಎಸ್ ಮೋಟಾರ್ ಮಾರುಕಟ್ಟೆ ಮುಖ್ಯಸ್ಥ ಎಚ್.ಎಸ್ ಗೋಯಿಂಡಿ ಸುದ್ದಿಗಾರರಿಗೆ ತಿಳಿಸಿದರು.ಪ್ರತಿ ಲೀಟರ್ ಪೆಟ್ರೋಲ್‌ಗೆ 67 ಕಿ.ಮೀ ಇಂಧನ ಕ್ಷಮತೆ ಹೊಂದಿರುವ`ಫೀನಿಕ್ಸ್'ನ ಬೆಂಗಳೂರು ಎಕ್ಸ್‌ಷೋರೂಂ ಬೆಲೆರೂ51,170. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry