ಟಿವಿ ನಿರೂಪಕಿಯ ಮುಖ ಕಚ್ಚಿದ ನಾಯಿ

7

ಟಿವಿ ನಿರೂಪಕಿಯ ಮುಖ ಕಚ್ಚಿದ ನಾಯಿ

Published:
Updated:

ವಾಷಿಂಗ್ಟನ್(ಐಎಎನ್‌ಎಸ್): ಖಾಸಗಿ ಟಿ.ವಿ ವಾಹಿನಿಯ ನೇರ ಪ್ರಸಾರ ಕಾರ್ಯಕ್ರಮದ ಸಂದರ್ಭದಲ್ಲಿ ನಾಯಿಯೊಂದು ನಿರೂಪಕಿಯ ಮುಖವನ್ನು ಕಚ್ಚಿ ವಿರೂಪಗೊಳಿಸಿದ ಘಟನೆ ಕೊಲೊರಾಡೋದಲ್ಲಿ ವರದಿಯಾಗಿದೆ. ಕೆಯುಎಸ್‌ಎ ಟಿ.ವಿ ಚಾನೆಲ್ ನಿರೂಪಕಿ ಕೈಲ್ ಡೈರ್ ಅವರು ಬೆಳಗಿನ ವೇಳೆಯಲ್ಲಿ ನೇರ ಪ್ರಸಾರ ಕಾರ್ಯಕ್ರಮ ನಡೆಸಿಕೊಡುವಾಗ 85 ಪೌಂಡ್ ತೂಕದ ಬಲಶಾಲಿ (ಅರ್ಜೆಂಟಿನಾ ಮ್ಯಾಸ್ಟಿಫ್) ನಾಯಿಯನ್ನು ಮುದ್ದು ಮಾಡಲು ಬಗ್ಗಿದಾಗ ಅದು ಅವರ ಮುಖವನ್ನು ಬಲವಾಗಿ ಕಚ್ಚಿದೆ. ತೀವ್ರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲುಗೊಳಿಸಲಾಯಿತು. ಮುಖ ಮೂಲ ಸ್ವರೂಪಕ್ಕೆ ಬರಲು ಬುಧವಾರ ಶಸ್ತ್ರಕ್ರಿಯೆ ನಡೆಸಲಾಯಿತು ಎಂದು `ದಿ ಡೈಲಿ ಮೇಲ್~ ವರದಿ ಮಾಡಿದೆ.ಇಲ್ಲಿ ತೀವ್ರ ಚಳಿಯ ವಾತಾವರಣ ಇದ್ದು, ಹೆಪ್ಪುಗಟ್ಟಿದ ಕೊಳದಿಂದ ಆ ನಾಯಿಯನ್ನು  ಹೊರ ತೆಗೆಯಲಾಗಿತ್ತು. ಇದರ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಚರ್ಚೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry