ಟಿ.ವಿ ಪ್ರಭಾವದಿಂದ ನೈಜ ಕಲಿಕೆಗೆ ಆಪತ್ತು

7

ಟಿ.ವಿ ಪ್ರಭಾವದಿಂದ ನೈಜ ಕಲಿಕೆಗೆ ಆಪತ್ತು

Published:
Updated:

ಹೊಳೆನರಸೀಪುರ: ದೂರದರ್ಶನ ಪ್ರಭಾವದಿಂದಾಗಿ ಮಕ್ಕಳ ನೈಜ ಕಲಿಕೆಗೆ ಸಾಧ್ಯವಾಗುತ್ತಿಲ್ಲ. ನಮ್ಮ ಸಂಸ್ಕೃತಿ ಅಣಿಕಿಸುವ ಅಥವಾ ಅದರ ವಿರುದ್ಧ ವಾದ ನಿಲುವು ಹೊಂದಿದ ಕಾರ್ಯ ಕ್ರಮಗಳಿಂದ ಮಕ್ಕಳು ಗೊಂದಲಕ್ಕೆ ಈಡಾಗಿದ್ದಾರೆ ಎಂದು ಗಮಕ ಕಲಾವಿದೆ ಪ್ರಿಯದರ್ಶಿನಿ ಅಯ್ಯಂಗಾರ್ ನುಡಿದರು.ಶನಿವಾರ ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ತಾಲ್ಲೂಕು ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ವಚನ ಗಾಯನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ವೈಜ್ಞಾನಿಕವಾಗಿ ಬೆಳೆ ಯುತ್ತಾ ಕಂಪ್ಯೂಟರ್, ಟಿ.ವಿ ಮೇಲಿನ ಆಕರ್ಷಣೆಗೆ ಒಳಗಾಗಿದ್ದಾರೆ. ನಮ್ಮ ಸಾಹಿತ್ಯ, ಸಂಸ್ಕೃತಿ ಅವರಿಗೆ ರುಚಿಸುತ್ತಿಲ್ಲ.

ಪುಸ್ತಕಗಳನ್ನು ಓದಿ ಅರ್ಥಮಾಡಿಕೊ ಳ್ಳುವ ಕಲೆಯಲ್ಲೂ ಹಿಂದೆ ಬೀಳುತ್ತಿದ್ದಾರೆ ಎಂದು ವಿಷಾದಿಸಿದರು. ಜಾಗತೀಕರಣದ ಹೆಸರಿನಲ್ಲಿ ಸಂಸ್ಕೃತಿಗೆ ವ್ಯತಿರಿಕ್ತವಾಗಿ ಬದುಕುವುದು ಭವಿಷ್ಯಕ್ಕೆ ಮಾರಕ. ವಿದ್ಯಾರ್ಥಿ ಜೀವವದಲ್ಲೇ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಪ್ರಿಯದರ್ಶಿನಿ ಅಯ್ಯಂಗಾರ್ ಅವರ `ಜ್ಯೇಷ್ಠ ಮಾವ ಮತ್ತು ಆಷಾಡ ಮಾವ~ ಪುಸ್ತಕಗಳನ್ನು ಕಾದಂಬರಿಕಾರ ನಾಗೇಶ್ ಕೌಂಡಿನ್ಯ  ಬಿಡುಗಡೆ ಮಾಡಿದರು.  ಬಳಿಕ ಮಾತನಾಡಿ, ಗಮಕ ಮತ್ತು ಸಂಗೀತ ವಿದ್ವಾಂಸರಾಗಿ ಹತ್ತಾರು ಕೃತಿ ರಚಿಸಿ ಸಾಹಿತ್ಯ ಕ್ಷೇತ್ರದಲ್ಲೂ ಪ್ರಿಯ ದರ್ಶಿನಿ ಅಯ್ಯಂಗಾರ್ ಛಾಪು ಮೂಡಿಸಿದ್ದಾರೆ. ಗಮಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಎಂದರು.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಟ್ಟಸ್ವಾಮಪ್ಪ, ಜಿಲ್ಲಾ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ನಾಯಕರ ಹಳ್ಳಿ ಮಂಜೇಗೌಡ, ಪುರಸಭಾ ಸದಸ್ಯ ಬಾ.ರಾ. ಸುಬ್ಬರಾಯ, ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ, ಪ್ರಾಂಶುಪಾಲರಾದ ಸರೋಜಿನಿ ದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಯೋಗೇಶ್, ಸಾಹಿತಿ ಗುಂಜೇವು ಅಣ್ಣಾಜಪ್ಪ ಹಾಗೂ ಜಿ.ಬಂಗಾರಪ್ಪ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry