ಭಾನುವಾರ, ಜೂನ್ 20, 2021
23 °C

ಟಿಸಿಎಸ್‌ನಿಂದ ರಸಪ್ರಶ್ನೆ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್’ (ಟಿಸಿಎಸ್) ಹಾಗೂ ಕರ್ನಾಟಕ ಸರ್ಕಾರ ಸ್ಥಾಪಿಸಿರುವ ಸ್ವಾಯತ್ತ ಸಂಸ್ಥೆಯಾದ ‘ಬೋರ್ಡ್ ಆಫ್ ಎಜುಕೇಷನ್ ಸ್ಟ್ಯಾಂಡರ್ಡ್ಸ್’ (ಬಿಐಟಿಇಎಸ್) ಸಹಯೋಗದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ‘ಟಿಸಿಎಸ್ ಟೆಕ್‌ಬೈಟ್ಸ್’ ಎಂಬ ಐಟಿ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲು ಉದ್ದೇಶಿಸಲಾಗಿದೆ. ಐದನೇ ಆವೃತ್ತಿಯ ಈ ಸ್ಪರ್ಧೆಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿವಿಧ ಕಂಪೆನಿಗಳ ಸಹಭಾಗಿತ್ವವಿರುತ್ತದೆ. ಎಲ್ಲ ವಿಭಾಗಗಳ ಮತ್ತು ಎಲ್ಲ ಸೆಮಿಸ್ಟರ್‌ನ ಎಂಜಿನಿಯರಿಂಗ್ (ಬಿ.ಇ/ ಬಿಟೆಕ್) ವಿದ್ಯಾರ್ಥಿಗಳಿಗೂ ಮುಕ್ತ ಪ್ರವೇಶ.ಪ್ರತಿ ಎಂಜಿನಿಯರಿಂಗ್ ಕಾಲೇಜು ತಲಾ ಇಬ್ಬರು ಸ್ಪರ್ಧಿಗಳಿರುವ ೧೦ ತಂಡಗಳನ್ನು ಈ ‘ಟಿಸಿಎಸ್ ಟೆಕ್‌ಬೈಟ್ಸ್’ ರಸಪ್ರಶ್ನೆ ಸ್ಪರ್ಧೆಗೆ ಕಳುಹಿಸಬಹುದು. ಆಂತರಿಕ ಆಯ್ಕೆ ಪ್ರಕ್ರಿಯೆ ನಂತರ ಪ್ರಾದೇಶಿಕ ಹಂತದ ಅಂತಿಮ ಸುತ್ತಿಗೆ ಅರ್ಹರನ್ನು ಇಲ್ಲಿ ಆಯ್ಕೆ ಮಾಡಲಾಗುತ್ತದೆ. ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಎಂಜಿನಿಯರಿಂಗ್ ಕಾಲೇಜುಗಳು ತಮ್ಮ ಪ್ರತಿನಿಧಿಗಳ ವಿವರವನ್ನು ಮಾರ್ಚ್ ೧೭ಕ್ಕೂ ಮುನ್ನ  bitesitquiz@gmail.com ಇ–ಮೇಲ್  ವಿಳಾಸಕ್ಕೆ ಅಥವಾ The Coordinator, BITES–TCS IT Quiz, BITES, #9 Ground floor, UNI Bldg, Thimmaiah Rd, Millers Tank Bed, Bangalore– 52 ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ದೂ: ೦೮೦ ೪೧೨೩೫೮೮೯ ಸಂಪರ್ಕಿಸಿ.ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕ್ಷೇತ್ರದ ಕುರಿತು ಹೆಚ್ಚಿನ ಅರಿವು ಮೂಡಿಸುವ ಸಲುವಾಗಿಯೇ ಹಮ್ಮಿಕೊಳ್ಳಲಾಗಿರುವ ಈ ಸ್ಪರ್ಧೆ ಜ್ಞಾನಾರ್ಜನೆ ಮತ್ತು ಕೌಶಲ ಅಭಿವೃದ್ಧಿ ದೃಷ್ಟಿಯಿಂದ ಬಹಳ ಮಹತ್ವದ್ದು ಎಂದು ‘ಬಿಐಟಿಇಎಸ್’ ಅಧ್ಯಕ್ಷ ಆರ್.ನಟರಾಜನ್ ಅಭಿಪ್ರಾಯಪಟ್ಟಿದ್ದಾರೆ.ವಿದ್ಯಾರ್ಥಿಗಳಲ್ಲಿನ ಆಲೋಚನಾ ಕ್ರಮದಲ್ಲಿ ಬದಲಾವಣೆ ತರುವುದು ರಸಪ್ರಶ್ನೆ ಸ್ಪರ್ಧೆಯ ಮುಖ್ಯ ಉದ್ದೇಶ. ಈಗಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಿರಂತರ ಕಲಿಕೆ ಇದ್ದರೇನೇ ಯಶಸ್ಸು ಸಾಧ್ಯ ಎಂಬುದನ್ನು ಮನದಟ್ಟು ಮಾಡಿಕೊಡುವುದು ಈ ಬುದ್ಧಿಮತ್ತೆ ಪರೀಕ್ಷಾ ಸ್ಪರ್ಧೆಯ ಗುರಿಯಾಗಿದೆ’ ಎಂದಿದ್ದಾರೆ, ‘ಟಿಸಿಎಸ್ ಫೈನಾನ್ಷಿಯಲ್ ಸಲ್ಯೂಷನ್ಸ್’ನ ಅಧ್ಯಕ್ಷ ಎನ್.ಗಣಪತಿ ಸುಬ್ರಹ್ಮಣ್ಯನ್ ಮತ್ತು ‘ಬಿಐಟಿಇಎಸ್’ ಅಧ್ಯಕ್ಷ ಪ್ರೊ. ಆರ್.ನಟರಾಜನ್,

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.