ಶುಕ್ರವಾರ, ಜೂನ್ 25, 2021
29 °C

ಟಿಸಿಎಸ್ ಟೆಕ್‌ಬೈಟ್ಸ್ ರಸಪ್ರಶ್ನೆ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರಕಾರದ ಅನುದಾನಿತ ಐಟಿ ಸಂಸ್ಥೆಯಾಗಿರುವ ಬೋರ್ಡ್ ಫಾರ್ ಐಟಿ ಎಜುಕೇಷನ್ ಸ್ಟಾಂಡರ್ಸ್(ಬಿಐಟಿಇಎಸ್) ಸಂಸ್ಥೆಯು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ನ ಸಹಯೋಗದೊಂದಿಗೆ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗಾಗಿ `ಟಿಸಿಎಸ್ ಟೆಕ್‌ಬೈಟ್ಸ್~  ರಸಪ್ರಶ್ನೆ ಸ್ಪರ್ಧೆಯನ್ನು ಏ.9ರಿಂದ 26ರವರೆಗೆ ಹಮ್ಮಿಕೊಂಡಿದೆ.ತುಮಕೂರು (ಏ.9), ಹುಬ್ಬಳ್ಳಿ (ಏ.10), ಗುಲ್ಬರ್ಗ(ಏ.16), ಮೈಸೂರು (ಏ.21), ಮಂಗಳೂರು(ಏ.23), ಬೆಂಗಳೂರು(ಏ.26) ಸೇರಿದಂತೆ ಆರು ವಲಯಗಳಲ್ಲಿ ಸ್ಪರ್ಧೆ ನಡೆಯಲಿದೆ. ರಾಜ್ಯ ಮಟ್ಟದ ಅಂತಿಮ ಸ್ಪರ್ಧೆಯು ಏ.26ರಂದು ಬೆಂಗಳೂರಿನಲ್ಲಿ ನಡೆಯಲಿದೆ.  ತಂತ್ರಜ್ಞಾನ, ತಾಂತ್ರಿಕ ಪರಿಸರ, ವಹಿವಾಟು ಮತ್ತು ಹೊಸ ಸಾಧ್ಯತೆಗಳು ಸೇರಿದಂತೆ ಸಂಪೂರ್ಣ ಐಟಿ ಆಧಾರಿತ ವಿಚಾರಗಳನ್ನು ಒಳಗೊಂಡು ಸ್ಪರ್ಧೆ ನಡೆಯಲಿದೆ. ಕ್ವಿಜ್‌ಮಾಸ್ಟರ್ ಗಿರಿ ಬಾಲಸುಬ್ರಹ್ಮಣ್ಯಂ ಅವರು ಸ್ಪರ್ಧೆಯನ್ನು ನಡೆಸಿಕೊಡಲಿದ್ದಾರೆ. ಸ್ಥಳೀಯ ಮತ್ತು ರಾಜ್ಯ ಮಟ್ಟದ ವಿಜೇತರಿಗೆ ಟಿಸಿಎಸ್‌ನಿಂದ ಶೈಕ್ಷಣಿಕ ವಿದ್ಯಾರ್ಥಿ ವೇತನ ಸೇರಿದಂತೆ ಆಕರ್ಷಕ ಬಹುಮಾನಗಳಿರುತ್ತವೆ.ಪ್ರತಿ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯಿಂದ 2 ಸದಸ್ಯರಿರುವ 10 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಶೈಕ್ಷಣಿಕ ಸಂಸ್ಥೆಗಳು ಮಾ.22ರ  ಒಳಗೆ ಪ್ರವೇಶ ಮಾಹಿತಿ ಕಳುಹಿಸಬೇಕು. ವಿಳಾಸ-ಬೈಟ್ಸ್-ಟಿಸಿಎಸ್ ಐಟಿ ಕ್ವಿಜ್ ಬೈಟ್ಸ್, ನಂ. 9 ನೆಲ ಮಹಡಿ, ತಿಮ್ಮಯ್ಯ ರಸ್ತೆ, ಮಿಲ್ಲರ್ ಟ್ಯಾಂಕ್ ಬಂಡ್. ಇಮೇಲ್- itquiz@bites.org.in.    ಫ್ಯಾಕ್ಸ್- 22207270/71

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.