ಟಿಸಿಎಸ್ ಮಾರುಕಟ್ಟೆ ಮೌಲ್ಯ ರೂ 4 ಲಕ್ಷ ಕೋಟಿ

7

ಟಿಸಿಎಸ್ ಮಾರುಕಟ್ಟೆ ಮೌಲ್ಯ ರೂ 4 ಲಕ್ಷ ಕೋಟಿ

Published:
Updated:

ಮುಂಬೈ (ಪಿಟಿಐ):  ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಮಾರುಕಟ್ಟೆ ಮೌಲ್ಯ ಸೋಮವಾರ ಮುಂಬೈ ಷೇರುಪೇಟೆಯಲ್ಲಿ ರೂ4 ಲಕ್ಷ ಕೋಟಿ ಗಡಿ ದಾಟಿದೆ. ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ನಂತರ  ಮಾರುಕಟ್ಟೆ ಮೌಲ್ಯದಲ್ಲಿ ಈ ಮೈಲಿಗಲ್ಲು ದಾಟಿದ ಎರಡನೆಯ ಕಂಪೆನಿ ಎಂಬ ಹೆಗ್ಗಳಿಕೆಗೂ `ಟಿಸಿಎಸ್' ಪಾತ್ರವಾಗಿದೆ.  ಕಂಪೆನಿಯ ಮಾರುಕಟ್ಟೆ ಮೌಲ್ಯ ಸೋಮವಾರ ವಹಿವಾಟಿನ ಅಂತ್ಯಕ್ಕೆ  ರೂ4,00,868  ಕೋಟಿಗೆ ಏರಿಕೆ ಕಂಡಿದೆ.  2004ರಲ್ಲಿ ಕಂಪೆನಿ ಮುಂಬೈ ಷೇರು ಪೇಟೆಯಲ್ಲಿ  ವಹಿವಾಟಿಗೆ ನೋಂದಾಯಿಸಿಕೊಂಡಿತ್ತು. ನಂತರ ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಿದೆ.ಮುಕೇಶ್ ಅಂಬಾನಿ ಒಡೆತನದ `ಆರ್‌ಐಎಲ್' 2007ರ ಅಕ್ಟೋಬರ್‌ನಲ್ಲಿ ಮಾರುಕಟ್ಟೆ ಮೌಲ್ಯದಲ್ಲಿ ರೂ4 ಲಕ್ಷ ಕೋಟಿ ಗಡಿ ದಾಟಿತ್ತು. ಆದರೆ, ಇತ್ತೀಚೆಗೆ `ಆರ್‌ಐಎಲ್'ನ ಷೇರು ಮೌಲ್ಯ ತೀವ್ರವಾಗಿ ಕುಸಿದಿದ್ದು ಮಾರುಕಟ್ಟೆ ಮೌಲ್ಯ ರೂ2.85 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.  ಸದ್ಯ `ಟಿಸಿಎಸ್' ಮಾರುಕಟ್ಟೆ ಮೌಲ್ಯ `ಆರ್‌ಐಎಲ್'ಗಿಂತಲೂ ರೂ1 ಲಕ್ಷ ಕೋಟಿಗಿಂತಲೂ  ಹೆಚ್ಚಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry