ಟಿಸಿಎಸ್ ಲಾಭ ರೂ. 3,550 ಕೋಟಿ

7

ಟಿಸಿಎಸ್ ಲಾಭ ರೂ. 3,550 ಕೋಟಿ

Published:
Updated:
ಟಿಸಿಎಸ್ ಲಾಭ ರೂ. 3,550 ಕೋಟಿ

ಮುಂಬೈ (ಪಿಟಿಐ): ದೇಶದ ಅತಿ ದೊಡ್ಡ ಐ.ಟಿ ಸೇವಾ ಸಂಸ್ಥೆ `ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್'(ಟಿಸಿಎಸ್) ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿರೂ.3,550 ಕೋಟಿ ನಿವ್ವಳ ಲಾಭ ಗಳಿಸಿ, ಶೇ 26.7ರಷ್ಟು ಪ್ರಗತಿ ದಾಖಲಿಸಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪೆನಿಯ ನಿವ್ವಳ ಲಾಭರೂ.2,803 ಕೋಟಿ ಇದ್ದಿತು.ಡಿ. 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪೆನಿಯ ಒಟ್ಟು ವರಮಾನ ಶೇ 21.7ರಷ್ಟು ಹೆಚ್ಚಿ,ರೂ.16,070 ಕೋಟಿಗೆ ಏರಿದೆ. 2011-12ರ ಮೂರನೇ ತ್ರೈಮಾಸಿಕದ ವರಮಾನರೂ.13,204 ಕೋಟಿಯಷ್ಟಿದ್ದಿತು.`ಉತ್ಪಾದನೆ ಮತ್ತು ಆವಿಷ್ಕಾರಗಳಿಗೆ ಆದ್ಯತೆ ನೀಡಿದ ಪರಿಣಾಮ ವರಮಾನ ಮತ್ತು ನಿವ್ವಳ ಲಾಭ ವಿಭಾಗಗಳಲ್ಲಿ ಅತ್ಯುತ್ತಮ ಪ್ರಗತಿಯಾಗಿದೆ' ಎಂದು `ಟಿಸಿಎಸ್' ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಚಂದ್ರಶೇಖರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.`ಮೂರನೇ ತ್ರೈಮಾಸಿಕದಲ್ಲಿ ಒಟ್ಟಾರೆ 9,561 ಉದ್ಯೋಗಿಗಳು ಕಂಪೆನಿಗೆ ಸೇರಿದಂತಾಗಿದೆ. ಒಟ್ಟು ನೌಕರರ ಸಂಖ್ಯೆ 2,63,637ಕ್ಕೇರಿದೆ.  ಮೂರೂ ತ್ರೈಮಾಸಿಕಗಳಲ್ಲಿ ಒಟ್ಟು 50 ಸಾವಿರ ಅಭ್ಯರ್ಥಿಗಳನ್ನು ನೇಮಿಸಿಕೊಂಡಂತಾಗಿದೆ' ಎಂದು `ಟಿಸಿಎಸ್' ಉಪಾಧ್ಯಕ್ಷ ಅಜಯ್ ಮಖರ್ಜಿ ವಿವರ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry