ಟಿಸಿಎಸ್ ಶೇ 49 ಪ್ರಗತಿ

7

ಟಿಸಿಎಸ್ ಶೇ 49 ಪ್ರಗತಿ

Published:
Updated:

ಮುಂಬೈ(ಪಿಟಿಐ): ದೇಶದ ಅತಿದೊಡ್ಡ ಸಾಫ್ಟ್‌ವೇರ್ ಕಂಪೆನಿ `ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್~(ಟಿಸಿಎಸ್) ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ರೂ.3434 ಕೋಟಿ ನಿವ್ವಳ ಲಾಭ ಗಳಿಕೆಯೊಂದಿಗೆ ಶೇ 49.20ರಷ್ಟು ಭಾರಿ ಪ್ರಗತಿ ದಾಖಲಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿನ ನಿವ್ವಳ ಲಾಭ ರೂ. 2301 ಕೋಟಿ ಇದ್ದಿತು.`ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ 2ನೇ ತ್ರೈಮಾಸಿಕದಲ್ಲಿ ಕಂಪೆನಿಯ ವರಮಾನ ರೂ.11,633 ಕೋಟಿಯಿಂದ ರೂ.15,621 ಕೋಟಿಗೆ (ಶೇ 34.3) ಹೆಚ್ಚಿದೆ. ಕಂಪೆನಿಯ ವಿವಿಧ ದೇಶಗಳಲ್ಲಿನ ಘಟಕಗಳು ಎಲ್ಲ ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಿದ್ದರ ಪರಿಣಾಮ ಈ ಉತ್ತಮ ಸಾಧನೆ ಸಾಧ್ಯವಾಗಿದೆ ಎಂದು ಟಿಸಿಎಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಚಂದ್ರಶೇಖರನ್ ಶನಿವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಲಾಭಾಂಶ: 2ನೇ ಮಧ್ಯಂತರ ಲಾಭಾಂಶವಾಗಿ ರೂ.1 ಮುಖಬೆಲೆಯ ಪ್ರತಿ ಷೇರಿಗೆ ರೂ.3 ವಿತರಿಸಲಾಗುವುದು ಎಂದಿದ್ದಾರೆ.ಸಿಬ್ಬಂದಿ ನೇಮಕ: ಜುಲೈ-ಸೆಪ್ಟೆಂಬರ್ ನಡುವೆ 41 ಕಂಪೆನಿಗಳು ಹೊಸ ಗ್ರಾಹಕರಾಗಿವೆ. 18654 ಸಿಬ್ಬಂದಿ ನೇಮಕವಾಗಿದ್ದರೆ, 8123 ಮಂದಿ ನಿರ್ಗಮಿಸಿದ್ದಾರೆ. ಸದ್ಯ ಕಂಪೆನಿಯ ಸಿಬ್ಬಂದಿ ಸಂಖ್ಯೆ 2.54 ಲಕ್ಷಕ್ಕೇರಿದೆ.

ಸಿಎಫ್‌ಒ ನಿವೃತ್ತಿ: ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ(ಸಿಎಫ್‌ಒ) ಎಸ್.ಮಹಾಲಿಂಗಂ ಮುಂದಿನ ಫೆಬ್ರುವರಿ 9ರಂದು ನಿವೃತ್ತರಾಗಲಿದ್ದಾರೆ. ಬಿಜಿನೆಸ್ ಫೈನಾನ್ಸ್ ವಿಭಾಗದ ಉಪಾಧ್ಯಕ್ಷ ರಾಜೇಶ್ ಗೋಪಿನಾಥ್ ಅವರನ್ನು ಫೆಬ್ರುವರಿವರೆಗೆ ಉಪ `ಸಿಎಫ್‌ಒ~ ಆಗಿ ನೇಮಿಸಲಾಗಿದೆ ಎಂದಿದ್ದಾರೆ.ಷೇರು ಮೌಲ್ಯ ಕುಸಿತ: ಶುಕ್ರವಾರ ಸಂಜೆ ಷೇರುಪೇಟೆ ವಹಿವಾಟು ಮುಕ್ತಾಯಗೊಂಡ ನಂತರ ಟಿಸಿಎಸ್ ಫಲಿತಾಂಶ ಪ್ರಕಟಿಸಿದೆ. ಅದಕ್ಕೂ ಮುನ್ನ ನಡೆದ ವಹಿವಾಟಿನಲ್ಲಿ ಟಿಸಿಎಸ್ ಷೇರು ಶೇ 1.14ರಷ್ಟು ಮೌಲ್ಯ ಕಳೆದುಕೊಂಡು, ರೂ.1290.30ರಲ್ಲಿ ವಹಿವಾಟು ನಡೆಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry