ಭಾನುವಾರ, ನವೆಂಬರ್ 17, 2019
24 °C

ಟಿಸಿಎಸ್: 45 ಸಾವಿರ ಹೊಸ ನೇಮಕಾತಿ

Published:
Updated:

ಮುಂಬೈ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ನೌಕರರ ವೇತನವನ್ನು ಸರಾಸರಿ ಶೇ 7ರಷ್ಟು ಹೆಚ್ಚಿಸಲಾಗುವುದು ಹಾಗೂ 45 ಸಾವಿರ ಜನರನ್ನು ಹೊಸದಾಗಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಐ.ಟಿ ಸೇವಾ ಸಂಸ್ಥೆ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಹೇಳಿದೆ.ಏಪ್ರಿಲ್ ಮೊದಲ ವಾರದಿಂದ ವೇತನ ಪರಿಷ್ಕರಣೆ ಆರಂಭವಾಗಿದೆ. ಸಿಬ್ಬಂದಿ ಸಾಧನೆ ಆಧರಿಸಿ ವೇತನದಲ್ಲಿ ಶೇ 5ರಿಂದ ಶೇ 10ರಷ್ಟು ಏರಿಕೆ ಮಾಡುವ ಯೋಜನೆ ಇದೆ.  ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ  ಶೇ 4ರಿಂದ 6ರಷ್ಟು ಸರಾಸರಿ  ವೇತನ ಹೆಚ್ಚಳ ಮಾಡಲಾಗುವುದು ಎಂದು `ಟಿಸಿಎಸ್'ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಜಯ್ ಮುಖರ್ಜಿ ಸುದ್ದಿಗಾರರಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)