ಟಿ-50 ಯುದ್ಧ ವಿಮಾನ ಪ್ರದರ್ಶನ ಹಾರಾಟ

7

ಟಿ-50 ಯುದ್ಧ ವಿಮಾನ ಪ್ರದರ್ಶನ ಹಾರಾಟ

Published:
Updated:
ಟಿ-50 ಯುದ್ಧ ವಿಮಾನ ಪ್ರದರ್ಶನ ಹಾರಾಟ

ಮಾಸ್ಕೊ(ಐಎಎನ್‌ಎಸ್): ಭಾರತ ಮತ್ತು ರಷ್ಯ ಜಂಟಿಯಾಗಿ ಸುಮಾರು ಹತ್ತು ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸಿರುವ ಸುಕೋಯ್ ಐದನೇ ತಲೆಮಾರಿನ ಟಿ-50 ಯುದ್ಧ ವಿಮಾನ ಇಲ್ಲಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಮೊದಲ ಹಾರಾಟ ನಡೆಸಿತು.ಎರಡು ಟಿ-50 ಯುದ್ಧ ವಿಮಾನಗಳು ಪ್ರದರ್ಶನದಲ್ಲಿ 15 ನಿಮಿಷಗಳ ಕಾಲ ವೈಮಾನಿಕ ಕಸರತ್ತು ನಡೆಸಿದವು. ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಈ ಪ್ರದರ್ಶನಕ್ಕೆ ಸಾಕ್ಷಿಯಾದರು. 2010ರ ಜನವರಿಯಿಂದ ಈ ಯುದ್ಧ ವಿಮಾನ ವಿವಿಧ ಪರೀಕ್ಷೆಗಳಿಗೆ ಒಳಗಾಗಿದ್ದು, ಅಂತಿಮವಾಗಿ ಬುಧವಾರ ನಡೆದ ವೈಮಾನಿಕ ಪ್ರದರ್ಶನದಲ್ಲಿ ಹಾರಾಟ ನಡೆಸಿದವು.ಆದರೆ ಹಾರಾಟ ನಡೆಸಿದ ನಂತರ ಅವುಗಳನ್ನು ಪ್ರದರ್ಶನಕ್ಕೆ ಇಡಲಿಲ್ಲ. ಬದಲಾಗಿ ತಮ್ಮ ನೆಲೆಗಳಿಗೆ ಕಳುಹಿಸಲಾಯಿತು.ಈ ಯುದ್ಧ ವಿಮಾನ ರಷ್ಯಾದ ಸುಕೋಯ್-30 ಯುದ್ಧ ವಿಮಾನವನ್ನು ಹೋಲುತ್ತಿದ್ದು, ಅಸ್ತ್ರಗಳನ್ನು ಸಲಕರಣೆಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಳ್ಳಲಿದೆ. ವಿಮಾನವು ರಾಡರ್‌ಗೆ ಪತ್ತೆಯಾಗುವುದಿಲ್ಲ. ಜತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ವಿಮಾನ ಅತಿವೇಗದಲ್ಲಿ (ಶಬ್ದದ ಎರಡು ಪಟ್ಟು) ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. 2013ರ ವರೆಗೆ ಪರೀಕ್ಷಾರ್ಥ ಪ್ರಯೋಗ ನಡೆಯುವುದು. ಅಂತಿಮವಾಗಿ 2014ರಿಂದ ಈ ವಿಮಾನಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುವುದು.ಇದು ಭಾರತದ ಅತಿದೊಡ್ಡ ರಕ್ಷಣಾ ಯೋಜನೆಯಾಗಿದ್ದು, ರಷ್ಯಾದ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸುತ್ತಿದೆ. ರಷ್ಯಾದ ವಾಯುಪಡೆಗಾಗಿ ಏಕ ಆಸನ ಹಾಗೂ ಭಾರತೀಯ ವಾಯು ದಳಕ್ಕಾಗಿ ಎರಡು ಆಸನದ ವಿಮಾನ ವಿನ್ಯಾಸಗೊಳಿಸಲಾಗಿದೆ. ಭಾರತ ಶೇ 30ರಷ್ಟು ವಿನ್ಯಾಸಗೊಳಿಸಿದರೆ, ಮಿಕ್ಕ ವಿನ್ಯಾಸವನ್ನು ರಷ್ಯಾದ ವಿಜ್ಞಾನಿಗಳು ಮಾಡಿದ್ದಾರೆ.ಈ ಯುದ್ಧ ವಿಮಾನವು ಅಮೆರಿಕದ ಅತ್ಯಾಧುನಿಕ ಎಫ್-22 ಯುದ್ಧ ವಿಮಾನಕ್ಕೆ ಸಮನಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಎಫ್-22 ಯುದ್ಧ ವಿಮಾನಕ್ಕೆ ಹೋಲಿಸಿದರೆ ಅರ್ಧದಷ್ಟು ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಟಿ-50 ಯುದ್ಧ ವಿಮಾನ ತಯಾರಾಗುತ್ತದೆ.5,500 ಕಿ.ಮೀ. ದೂರದಿಂದ 2,960 ಕಿ.ಮೀ ಅಂತರ ಕ್ರಮಿಸಬಲ್ಲದು. ಜತೆಗೆ ಏಕ ಆಸನದ ವಿಮಾನದಲ್ಲಿ 12 ಕ್ಷಿಪಣಿ ಮತ್ತು ಬಾಂಬ್‌ಗಳು ಹಾಗೂ ಎರಡು ಆಸನದ ವಿಮಾನದಲ್ಲಿ 16 ಕ್ಷಿಪಣಿ ಮತ್ತು ಬಾಂಬ್‌ಗಳನ್ನು ಹೊತ್ತೊಯ್ಯುವ  ಸಾಮರ್ಥ್ಯ ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry