ಟೀಮ್ ಇಂಡಿಯಾ ಮುಂದೆ ಮಾತ್ರವೇ ಬೆತ್ತಲು: ಪೂನಮ್

7

ಟೀಮ್ ಇಂಡಿಯಾ ಮುಂದೆ ಮಾತ್ರವೇ ಬೆತ್ತಲು: ಪೂನಮ್

Published:
Updated:
ಟೀಮ್ ಇಂಡಿಯಾ ಮುಂದೆ ಮಾತ್ರವೇ ಬೆತ್ತಲು: ಪೂನಮ್

ನವದೆಹಲಿ (ಐಎಎನ್‌ಎಸ್): ಭಾರತದ ಕ್ರಿಕೆಟ್ ತಂಡವು ವಿಶ್ವಕಪ್ ಗೆದ್ದರೆ ಬೆತ್ತಲೆಯಾಗುವುದಾಗಿ ಹೇಳಿಕೆ ನೀಡಿ ಜಗತ್ತಿನಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಭಾರತದ ರೂಪದರ್ಶಿ ಪೂನಮ್ ಪಾಂಡೆ ತಾನು ಎಲ್ಲರೆದುರೂ ಬೆತ್ತಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಕೆಯ ಮ್ಯಾನೆಜರ್ ಎಂ.ವಿಪಿನ್ ಭಾನುವಾರ ಈ ವಿಷಯ ತಿಳಿಸಿದ್ದು, ಕೇವಲ ಟೀಮ್ ಇಂಡಿಯಾ ಆಟಗಾರರ ಎದುರು ಮಾತ್ರವೇ ಪೂನಮ್ ಬೆತ್ತಲೆಯಾಗಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರೆ.ಪೂನಮ್ ಅವರು ಬಿಸಿಸಿಐಗೆ ಈ ಕುರಿತು ಬರೆದಿರುವ ಅಧಿಕೃತ ಮನವಿ ಪತ್ರದ ಬಗ್ಗೆಯೂ ವಿಪಿನ್ ವಿವರ ನೀಡಿದ್ದಾರೆ. ಈ ಮನವಿ ಪತ್ರದ ಅನುಸಾರ 19 ವರ್ಷದ ತರುಣಿ ಪೂನಮ್ ಅವರು, ‘ಬಿಸಿಸಿಐ ನನಗೆ ಇದಕ್ಕಾಗಿ ಸೂಕ್ತ ಅನುಮತಿ ನೀಡಬೇಕು. ‘ನನ್ನ ಈ ಕೃತ್ಯ ಟೀಮ್ ಇಂಡಿಯಾ ಆಟಗಾರರಿಗೆ ಒಂದು ರೀತಿಯ ಮನೋಚಿಕಿತ್ಸೆ. ಟೀಮ್ ಇಂಡಿಯಾ ಎಲ್ಲಿ ಬಯಸುತ್ತದೊ ಅಲ್ಲಿ ಬೆತ್ತಲಾಗಲು ನಾನು ಸಿದ್ಧ. ಇದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ವಿನಂತಿಸಿದ್ದಾರೆ.ಭಾರತ ಪಾಕಿಸ್ತಾನ ನಡುವೆ ಮೊಹಾಲಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯದ ವೇಳೆಯಲ್ಲಿ ಪೂನಮ್ ತಮ್ಮ ಈ ನಿರ್ಧಾರ ಪ್ರಕಟಿಸಿದ್ದರು. ಟೀಮ್ ಇಂಡಿಯಾ ವಿಶ್ವಕಪ್ ಗೆದ್ದಲ್ಲಿ ಬೆತ್ತಲಾಗುವುದಾಗಿ ಅವರು ಹೇಳಿದ್ದರು. ಇವರು ಕಳೆದ ವರ್ಷ ‘ಗ್ಲ್ಯಾಡ್‌ರ್ಯಾಗ್ಸ್’ ನಿಯತಕಾಲಿಕೆ ನಡೆಸಿದ ರೂಪದರ್ಶಿಗಳ ಆಯ್ಕೆ ಸ್ಪರ್ಧೆಯಲ್ಲಿ ಅತ್ಯುತ್ತಮ ಎಂಟು ಜನರ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry