ಟೀಮ್ ದ್ರೋಣ್ ತಂಡಕ್ಕೆ ಗೆಲುವು

ಭಾನುವಾರ, ಜೂಲೈ 21, 2019
21 °C

ಟೀಮ್ ದ್ರೋಣ್ ತಂಡಕ್ಕೆ ಗೆಲುವು

Published:
Updated:

ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯ ಏರೋ ಡಿಸೈನ್ ತಂಡ `ಟೀಮ್ ದ್ರೋಣ್~ ಈ ಬಾರಿ ಮತ್ತೆ ಮುನ್ನಡೆ ಸಾಧಿಸಿದೆ.

ಇಡೀ ಏಷ್ಯಾದಲ್ಲಿ ಸತತ ಮೂರನೇ ಬಾರಿ ತನ್ನ ಸಾಮರ್ಥ್ಯ ತೋರಿರುವ ಏಕೈಕ ತಂಡ ಎಂಬ ಹೆಗ್ಗಳಿಕೆಗೂ ಟೀಮ್ ದ್ರೋಣ್ ಪಾತ್ರವಾಯಿತು.

 

2009ರಲ್ಲಿ ಅಮೆರಿಕದಲ್ಲಿ ನಡೆದ `ಎಸ್‌ಎಇ ಏರೋ ಡಿಸೈನ್~ ಕಾರ್ಯಕ್ರಮದಲ್ಲಿ ಟೀಮ್ ದ್ರೋಣ್ ಪದಾರ್ಪಣೆ ಮಾಡಿತ್ತು. 2010-11ರ ಸಾಲಿನಲ್ಲಿ ಟೀಮ್ ದ್ರೋಣ್ ಮೌಖಿಕ ನಿರೂಪಣೆಯಲ್ಲಿ ಮೊದಲ ಸ್ಥಾನ ಗಳಿಸಿಕೊಂಡಿತು. 2010ರಲ್ಲಿ ವಾನ್‌ನೈಸ್‌ನಲ್ಲಿ ನಡೆದ ಏರೋ ಡಿಸೈನ್‌ನಲ್ಲಿ ಮೂರನೇ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.2011ರಲ್ಲಿ `ಎಸ್‌ಎಇ ಏರೋ ಡಿಸೈನ್‌ನ ಪೇಲೋಡ್ ಲಿಫ್ಟ್~ನಲ್ಲಿ ಪ್ರಥಮ ಸ್ಥಾನ ಪಡೆಯಿತು. ಈ ಬಾರಿಯೂ ಪೇಲೋಡ್ ಲಿಫ್ಟ್‌ನಲ್ಲಿ ಎರಡನೇ ಸ್ಥಾನ ಮತ್ತು ಮೈಕ್ರೋ ಕ್ಲಾಸ್ ವಿಭಾಗದಲ್ಲಿ ಅತ್ಯಧಿಕ ಪೇಲೋಡ್ ಫ್ರಾಕ್ಷನ್‌ಗಾಗಿ ಮೂರನೇ ಸ್ಥಾನ ಪಡೆದುಕೊಳ್ಳುವ ಮೂಲಕ ಸತತ ಮೂರನೇ ಬಾರಿ ಪ್ರಶಸ್ತಿ ಗಳಿಸಿಕೊಂಡಿದೆ.ಈ ಬಾರಿಯ ಎಸ್‌ಎಇ ಏರೋ ಡಿಸೈನ್‌ನಲ್ಲಿ ಒಂಬತ್ತು ರಾಷ್ಟ್ರಗಳ 75 ತಂಡಗಳು ಪಾಲ್ಗೊಂಡಿದ್ದವು. `ಈ ಯಶಸ್ಸಿಗೆ ನಮ್ಮ ವಿಶ್ವವಿದ್ಯಾಲಯದ ಬೆಂಬಲವೇ ಕಾರಣ. ಜತೆಗೆ ಎಲ್ಲಾ ಹಂತಗಳಲ್ಲೂ ನಮ್ಮ ಜತೆಗಿದ್ದ ಸಂಸ್ಥೆಯ ಅಧ್ಯಕ್ಷ ಡಾ. ಆರ್ ಚೆನ್ ರಾಜ್ ಜೈನ್‌ರಿಗೂ ಧನ್ಯವಾದ~ ಎಂದು ತಂಡ ಸಂತಸ ವ್ಯಕ್ತಪಡಿಸಿದೆ.ಈ ತಂಡದಲ್ಲಿ ಹರ್ಷವರ್ಧನ್, ಶ್ರೇಯಸ್ ವಿಜೈ ರೆಡ್ಡಿ,  ಶ್ರೇಯಸ್ ಡಿ.ಎಸ್, ನುರಗ್ ಜೋಶಿ, ಸ್ಕಂದ ಕಿಶೋರ್, ವಿವೇಕ್ ಸಿ.ಎಸ್, ತರುಣ್ ರಾಜ್, ಶಿವಪ್ರಸಾದ್ ಜಾಲಿ, ಸಂಜಯ್ ಶಿವೈನವ್, ಸಂದೇಶ್ ಶೆಟ್ಟಿ,  ಹರ್ಷವರ್ಧನ್ ಬಿ.ಜಿ. ಇದ್ದರು. ಕಾರ್ಯಕ್ರಮವು ವಿನ್ಯಾಸ ವರದಿ ಸಲ್ಲಿಕೆ, ತಾಂತ್ರಿಕ ಪ್ರಸ್ತುತಿ, ವಿಮರ್ಶೆ ಮತ್ತು ಸಿಸ್ಟಮ್ ತಪಾಸಣೆಯನ್ನು ಒಳಗೊಂಡಿತ್ತು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry