ಟೀವಿಯೊಳಗೆ ಟೀವಿ!

7

ಟೀವಿಯೊಳಗೆ ಟೀವಿ!

Published:
Updated:
ಟೀವಿಯೊಳಗೆ ಟೀವಿ!

ಕಿರುತೆರೆಯಲ್ಲಿ ಅಪಾರ ಬದಲಾವಣೆಗಳನ್ನು ದಾಖಲಿಸಿರುವ `ಇನ್‌ಸೈಡ್ ಇಂಡಿಯನ್ ಟೆಲಿವಿಷನ್~ ಕಾರ್ಯಕ್ರಮ ಡಿಸ್ಕವರಿ ಚಾನೆಲ್‌ನಲ್ಲಿ ಭಾನುವಾರ ರಾತ್ರಿ 8ಕ್ಕೆ ಪ್ರದರ್ಶನಗೊಳ್ಳಲಿದೆ.ಈ ಕಾರ್ಯಕ್ರಮವು ಮನರಂಜನಾ ಕ್ಷೇತ್ರವನ್ನು ಬದಲಾಯಿಸುವಲ್ಲಿ ಭಾರತೀಯ ಕಿರುತೆರೆಯ ಪಾತ್ರ ಹಾಗೂ ಅದು ಉತ್ತುಂಗಕ್ಕೇರಿದ ರೀತಿ ಬಗ್ಗೆ ಆಸಕ್ತಿಕರ ವಿವರ ನೀಡಲಿದೆ.ಜನಪ್ರಿಯ ತಾರೆಗಳಾದ ಕಮಲ ಹಾಸನ್, ಶಾರುಖ್ ಖಾನ್, ಅನುಪಮ್ ಖೇರ್, ಬಾಲಾಜಿ ಟೆಲಿಫಿಲ್ಮ್‌ನ ಏಕ್ತಾ ಕಪೂರ್ ಮತ್ತು ಝೀ ನೆಟ್‌ವರ್ಕ್‌ನ ಸುಭಾಷ್ ಗೋಯಲ್, ಸಾಕ್ಷಿ ತನ್ವರ್, ರಾಮ್ ಕಪೂರ್, ಸ್ಮೃತಿ ಇರಾನಿ, ರೋನಿತ್ ರಾಯ್ ಮೊದಲಾದವರು ತಮ್ಮ ಕಿರುತೆರೆ ಸಂಬಂಧಿ ಅನುಭವಗಳನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಿದ್ದಾರೆ.

1990ರಲ್ಲಿ ಸರ್ಕಾರಿ ನಿಯಂತ್ರಣದಲ್ಲಿ ಕೇವಲ ಎರಡು ಚಾನೆಲ್‌ಗಳಿದ್ದವು.ದೇಶದುದ್ದಗಲಕ್ಕೂ ಈಗ 800ಕ್ಕೂ ಹೆಚ್ಚಿನ ಚಾನೆಲ್‌ಳಿವೆ. ಕಿರುತೆರೆ ಮುಂದೆ ಇನ್ನೂ ಬೆಳೆಯುತ್ತದೆ. ಪ್ರಸ್ತುತ 148 ದಶಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಮನೆಗಳನ್ನು ತಲುಪುತ್ತಿದೆ.ಈ ಕಾರ್ಯಕ್ರಮದಲ್ಲಿ ಹಲವು ಪ್ರಮುಖರು, ತಜ್ಞರು ಕಿರುತೆರೆಯ ಆಕರ್ಷಣೆ, ಬೆಳವಣಿಗೆ ಮತ್ತು ಭವಿಷ್ಯದ ಸಾಧ್ಯತೆ ಕುರಿತು ತಮ್ಮ ವಿವರಣಾತ್ಮಕ ವಿಶ್ಲೇಷಣೆಗಳನ್ನು ವೀಕ್ಷಕರಿಗಾಗಿ ಸಾದರಪಡಿಸಲಿದ್ದಾರೆ. ಈ ಎಲ್ಲ ಆಸಕ್ತಿಕರ ಅಂಶಗಳನ್ನು ತಿಳಿಯುವ ಕುತೂಹಲವಿದ್ದರೆ ಇಂದು ರಾತ್ರಿ 8ಕ್ಕೆ ಡಿಸ್ಕವರಿ ಚಾನೆಲ್ ಟ್ಯೂನ್ ಮಾಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry