ಟೀವಿ ಮತ್ತು ಸಿನಿಮಾ

7

ಟೀವಿ ಮತ್ತು ಸಿನಿಮಾ

Published:
Updated:

ಅರಸು ಸರಸು ಇಬ್ಬರು ಸೇರಿ

ನಡೆಸಿದರೊಂದು ಸಂವಾದ

ಟೀವಿ ಸಿನಿಮಾ ಯಾವುದು ಹೆಚ್ಚು?

ಬೆಳದೇ ಬೆಳೆಯಿತು ವಾಗ್ವಾದ

`ಸಿನಿಮಾದಲ್ಲಿ ದೊಡ್ಡದು ಸ್ಕ್ರೀನು

ತಲೆಯೆತ್ತಲೆ ಬೇಕು ಎಂಥವನು

ಪುಟ್ಟದು ಒಂದು ಚೀಲವೆ ಸಾಕು

ತುಂಬಲು ಟೀವಿ ಸೆಟ್ಟನ್ನು!'

ಅರಸು ವಾದಕೆ ಸರಸು ಸೆಟೆದಳು

`ಆಫ್ ಮಾಡಲು ಆಗದು ಸಿನಿಮಾನ

ಆಡ್ತಾ ಓದ್ತಾ ನೋಡಲುಬಹುದು

ಮುದ್ದಿನ ಪುಟಾಣಿ ಟೀವೀನ!

ಸಿನಿಮಾ ಕತೆ ಒಂದೇನೆ ಎಳೆವರು

ಉದ್ದಕೆ ತಲೆಚಿಟ್ಟು

ಚಾನೆಲ್ ಚಾನೆಲ್ ಕತೆ ಬೇರೇನೆ

ಬೇಸರವೆಲ್ಲಾ ಚಟ್ಟು'

`ಟೀವಿ ನೋಡ್ತಾ ಕೂತುಬಿಟ್ರೆ

ಬರೇ ಡಿಸ್ಟರ್ಬೆನ್ಸು

ಫೋನಿನ ರಿಂಗು ಟ್ರಿಣ್ ಟ್ರಿಣ್

ಕಾಲಿಂಗ್ ಬೆಲ್ಲು ಟ್ರಣ್ ಟ್ರಣ್'

`ಟೀವಿ ಚಾನೆಲ್ ಬದಲಿಸಬಹುದು

ಎಷ್ಟೇ ಬಾರಿ ಮತ್ತೆ ಮತ್ತೆ

ಕೂತ ಜಾಗ ಬದಲಿಸಬಹುದು

ದಿಂಬು ಹಾಸಿಗೆ ಮತ್ತೆ!'

`ಟೀವಿ ಮುಂದೆ ಉಣ್ಣಲೆ ಬೇಕು

ಜಾಹಿರಾತಿನ ಕಹಿಯನ್ನು

ಮುಗಿಸುವುದಿಲ್ಲ ಯಾವುದೆ ಚಾನಲ್

ಧಾರಾವಾಹಿ ಕತೆಯನ್ನು!'

ಸರಸು ಮೇಲಕೆ ಹಾರಿದಳು

ಗಡಸು ದನಿಯಲಿ ಗುಡುಗಿದಳು

`ಕಾರ್ಟೂನ್ ನೆಟ್‌ವರ್ಕ್ ಬಲು ಚೆಂದ

ಅನಿಮಲ್ ಪ್ಲಾನೆಟ್ ಬಲು ಅಂದ

ಪೋಗೋ ಮುಂದೆ ಸಿನಿಮಾನೆ?

ಹೋಗೋ ಹೋಗೋ'

ತಂಗಿಯ ಮಾತು ಪುಂಗಿಯ ಹಾಗೆ

ಅಣ್ಣನು ಬಾಗಿದ ಹಾವಿನ ಹಾಗೆ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry