ಬುಧವಾರ, ನವೆಂಬರ್ 13, 2019
23 °C

ಟುಟುಗೆ `ಟೆಂಪಲ್‌ಟನ್'

Published:
Updated:
ಟುಟುಗೆ `ಟೆಂಪಲ್‌ಟನ್'

ಲಂಡನ್ (ಪಿಟಿಐ): ವಿಶ್ವದಲ್ಲಿ `ಪ್ರೀತಿ ಮತ್ತು ಕ್ಷಮೆ'ಯ ಸಂದೇಶ ಹರಡಿದ ನೊಬೆಲ್ ಶಾಂತಿ ಪುರಸ್ಕೃತ ಡೆಸ್ಮಂಡ್ ಟುಟು ಅವರು ಜೀವಮಾನದ ಸಾಧನೆಗಾಗಿ ಪ್ರತಿಷ್ಠಿತ ಟೆಂಪಲ್‌ಟನ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ.ಪೆನ್ಸಿಲ್ವೇನಿಯಾ ಮೂಲದ ಟೆಂಪಲ್‌ಟನ್ ಪ್ರತಿಷ್ಠಾನ ನೀಡುವ ಈ ಪ್ರಶಸ್ತಿ ಸುಮಾರು ರೂ. ಒಂಬತ್ತು ಕೋಟಿ ಬಹುಮಾನ ಮೊತ್ತ ಹೊಂದಿದೆ.  ಕೇಪ್‌ಟೌನ್‌ನ ಮಾಜಿ ಆರ್ಚ್‌ಬಿಷಪ್‌ಹಾಗೂ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರುದ್ಧ ಸೆಣಸಾಡಿದ 81ರ ಟುಟು ಅವರು ಮೇ 21ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪಡೆಯಲಿದ್ದಾರೆ.

ಪ್ರತಿಕ್ರಿಯಿಸಿ (+)