ಬುಧವಾರ, ನವೆಂಬರ್ 13, 2019
28 °C

ಟೆಂಪೊ ಡಿಕ್ಕಿ: ಬೈಕ್ ಸವಾರ ಸಾವು

Published:
Updated:

ಹೊಸಕೋಟೆ: ಕೋಲಾರ ರಸ್ತೆಯ ಕೊಳತೂರು ಗೇಟ್ ಬಳಿ ಸರಕು ಸಾಗಣೆ ಟೆಂಪೊ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.ಕ್ಯಾಲನೂರಿನ ಕೆ.ರಮೇಶ್ (37) ಮೃತಪಟ್ಟ ವ್ಯಕ್ತಿ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ತಾಲ್ಲೂಕಿನ ಹೆತ್ತಕ್ಕಿಯಲ್ಲಿರುವ ಸಂಬಂಧಿಕರನ್ನು ನೋಡಲು ಬೈಕ್‌ನಲ್ಲಿ ಬರುತ್ತಿದ್ದಾಗ ವೇಗವಾಗಿ ಬಂದ ಟೆಂಪೊ ಹಿಂಭಾಗದಿಂದ ಡಿಕ್ಕಿ ಹೊಡೆಯಿತು. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರತಿಕ್ರಿಯಿಸಿ (+)