ಮಂಗಳವಾರ, ನವೆಂಬರ್ 19, 2019
26 °C

ಟೆಕ್ನೋ ಮೇಳದಲ್ಲಿ ವಿಂಟೇಜ್ ಕಾರಿನ ವೈಭವ

Published:
Updated:

ಅವಧಿಗೂ ಮುನ್ನವೇ ನಗರಕ್ಕೆ ಕಾಲಿಟ್ಟಿತು ಬೇಸಿಗೆ. ಧಗೆಯ ವಾತಾವರವಣಕ್ಕೆ ಮತ್ತಷ್ಟು ಬಿಸಿಗಾಳಿ ತುಂಬಿದ್ದು ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ `ಕ್ಯಾಲಿಫ್ಯಾಕ್ಷನ್' ಹಬ್ಬ. ಕಾಲೇಜಿನ ಮ್ಯಾನೇಜ್‌ಮೆಂಟ್ ವಿಭಾಗ ಆಯೋಜಿಸಿದ್ದ `ಕ್ಯಾಲಿಫ್ಯಾಕ್ಷನ್' ಟೆಕ್ನೋ ಮ್ಯಾನೇಜ್‌ಮೆಂಟ್ ಮೇಳದಲ್ಲಿ 25ಕ್ಕೂ ಹೆಚ್ಚಿನ ಕಾಲೇಜುಗಳ 700 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾಲೇಜಿನ ಆವರಣದ ತುಂಬೆಲ್ಲಾ ವಿದ್ಯಾರ್ಥಿಗಳು ಜಲ ಸಂರಕ್ಷಣೆ ಹಾಗೂ ಇತರೆ ಸಂದೇಶಗಳಿರುವ ಭಿತ್ತಿಚಿತ್ರಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಸೃಜನಶೀಲತೆ ಮೆರೆದರು. ಅಂದಹಾಗೆ, ಈ ಮೇಳದ ಪ್ರಮುಖ ವಿಷಯ `ಜಲ ಸಂರಕ್ಷಣೆ'ಯೇ ಆಗಿತ್ತು. ಜಲ ಸಂರಕ್ಷಣೆ ಕುರಿತು ಹೆಚ್ಚಿನ ಕಾಳಜಿ ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.ಇದರ ಜತೆಗೆ ಕ್ರಿಯಾತ್ಮಕ ವಿನ್ಯಾಸದಿಂದ ಕೂಡಿದ್ದ `ಆಟೋಡ್ರೋಮ್', ವಿಂಟೇಜ್ ಕಾರುಗಳು, ಆರ್ 15 ಮತ್ತು ಹಯಾಬೂಸಾದಂತಹ ಕ್ರೀಡಾ ಬೈಕ್‌ಗಳನ್ನು ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿತ್ತು. ಇವೆಲ್ಲವೂ ಮೇಳದ ಪ್ರಮುಖ ಆಕರ್ಷಣೆಯಾಗಿದ್ದವು. ಇದರ ಜತೆಗೆ ಹಲವು ವಿಷಯ ಮಂಡನೆಗಳು ಮತ್ತು ಕ್ರೀಡಾ ಕಾರ್ಯಕ್ರಮಗಳು `ಕ್ಯಾಲಿಫ್ಯಾಕ್ಷನ್' ಹಬ್ಬಕ್ಕೆ ಸಾಕ್ಷಿಯಾದವು. `ವಿದ್ಯಾರ್ಥಿಗಳ ಕ್ರಿಯಾಶೀಲತೆ, ನಾವಿನ್ಯ ಮತ್ತು ಫಲಿತಾಂಶ ನೀಡುವ ಕಾರ್ಯಕ್ಷಮತೆಯನ್ನು ಉತ್ತೇಜಿಸುವುದು ನಮ್ಮ ಉದ್ದೇಶ. ಕ್ಯಾಲಿಫ್ಯಾಕ್ಷನ್ ಕಾರ್ಯಕ್ರಮದಲ್ಲಿನ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಟ್ರೈಲರ್ ಇದ್ದಂತೆ. ವಿದ್ಯಾರ್ಥಿಗಳು ಸಮಸ್ಯೆ ನಿವಾರಣೆ, ಒತ್ತಡ ನಿವಾರಣೆ ಮೊದಲಾದ ವಿಷಯಗಳನ್ನು ಹೆಚ್ಚು ಕ್ಷಮತೆಯಿಂದ ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಈ ಮೇಳದಲ್ಲಿ ವಿದ್ಯಾರ್ಥಿಗಳ ಪ್ರದರ್ಶನ  ನಿರೀಕ್ಷೆಗೂ ಮೀರಿ ಮೂಡಿಬಂದಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಐಇಎಂನ ವಿಭಾಗ ಮುಖ್ಯಸ್ಥರಾದ ರವಿಶಂಕರ್.ಕಾರ್ಯಕ್ರಮದಲ್ಲಿ ಟಿಸಿಎಸ್‌ನ ಮುಖ್ಯ ಸಲಹೆಗಾರ ಅರವಿಂದ್ ಶ್ರೀನಿವಾಸನ್, ಬಿಎಂಎಸ್‌ಸಿಇ ಉಪ ಪ್ರಾಂಶುಪಾಲ ಜಿ.ಎನ್.ಶೇಖರ್ ಹಾಜರಿದ್ದರು.   

ಪ್ರತಿಕ್ರಿಯಿಸಿ (+)