ಟೆಕ್‌ಕಾಮ್ ಮೊಬೈಲ್ ಮಾರುಕಟ್ಟೆಗೆ

7

ಟೆಕ್‌ಕಾಮ್ ಮೊಬೈಲ್ ಮಾರುಕಟ್ಟೆಗೆ

Published:
Updated:

ಬೆಂಗಳೂರು: ನವದೆಹಲಿ ಮೂಲದ ಐಟಿ ಸಂಸ್ಥೆ ಟೆಕ್‌ಕಾಮ್, ರಾಜ್ಯದ ಮಾರುಕಟ್ಟೆಗೆ ಮೊಬೈಲ್‌ಗಳನ್ನು ಪರಿಚಯಿಸುವುದರ ಮೂಲಕ ಕರ್ನಾಟಕದಲ್ಲಿ ತನ್ನ ವಹಿವಾಟು ಆರಂಭಿಸುವುದಾಗಿ ತಿಳಿಸಿದೆ.

ಗುರುವಾರ ಇಲ್ಲಿ ನಡೆದ ಸಮಾರಂಭದಲ್ಲಿ   ಟೆಕ್‌ಕಾಮ್ ಬ್ರಾಂಡ್‌ನ ಮೊಬೈಲ್‌ಗಳನ್ನು ಬಿಡುಗಡೆ ಮಾಡಲಾಯಿತು. ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ಗ್ರಾಹಕರಿಗೆ ಒದಗಿಸುತ್ತಿರುವುದಾಗಿ  ಸಂಸ್ಥೆಯ ನಿರ್ದೇಶಕ ಸಂದೀಪ್ ಕುಮಾರ್ ಕೆಡಿಯಾ ತಿಳಿಸಿದರು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿತರಕರು ಮತ್ತು 35 ಕಡೆಗಳಲ್ಲಿ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಸಂಸ್ಥೆಯ ಏಳು ಮಾದರಿಯ ಮೊಬೈಲ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇವುಗಳ ಬೆಲೆ  ರೂ. 1500 ರಿಂದ ರೂ. 4000ವರೆಗೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry