ಮಂಗಳವಾರ, ಜೂನ್ 15, 2021
22 °C

ಟೆಕ್‌ಸ್ಪಿನ್-12 ತಾಂತ್ರಿಕ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ವಿದ್ಯಾರ್ಥಿಗಳಲ್ಲಿ ಕೌಶಲ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಹಕಾರಿ ಯಾಗುವಂಥ ಚಟುವಟಿಕೆಗಳನ್ನು ನಮ್ಮ ಕಾಲೇಜು ನಿಂತರವಾಗಿ ನಡೆಸುತ್ತದೆ” ಎಂದು ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಮೋಹನಕುಮಾರ ಹೇಳಿದರು.ಇಲ್ಲಿನ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗವು `ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್~ ಪತ್ರಿಕಾ ಬಳದ ಮಾಧ್ಯಮ ಪ್ರಾಯೋಜಕತ್ವದಲ್ಲಿ ಆಯೋಜಿಸಿರುವ ಟೆಕ್‌ಸ್ಪಿನ್-12 ರಾಜ್ಯಮಟ್ಟದ ತಾಂತ್ರಿಕ ಉತ್ಸವದ ಬುಧವಾರ ನಡೆದ ಮುಕ್ತಾಯ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.ಪ್ರೊ.ಲೀನಾ ಸಕ್ಕರಿ ಮಾತನಾಡಿ, ಸ್ಪರ್ಧೆಯಲ್ಲಿ 35 ಎಂಜಿನಿಯರಿಂಗ್ ಕಾಲೇಜುಗಳಿಂದ 800 ವಿದ್ಯಾರ್ಥಿಗಳು ಭಾಗವಹಿಸಿದ್ದರು. 10 ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು, ಎಸ್‌ಡಿಎಂ ಕಾಲೇಜಿನ ವಿದ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜೇತರಾಗಿದ್ದಾರೆ ಎಂದು ತಿಳಿಸಿದರು. ಪ್ರೊ. ವಿ.ಕೆ.ಪರ್ವತಿ ಉಪಸ್ಥಿತರಿದ್ದರು.ವಿಜೇತ ವಿದ್ಯಾರ್ಥಿಗಳು ಇಂತಿದ್ದಾರೆ: ಚಕ್ರವ್ಯೆಹ ವಿಭಾಗದಲ್ಲಿ ಎಸ್‌ಡಿಎಂ ಕಾಲೇಜಿನ ಖುಶ್‌ಕುಮಾರ, ಸಂತೋಷ ಬಾಲಾ (ಪ್ರಥಮ), ಅಮಿತ ಕುಮಾರ, ಧೀರಜಕುಮಾರ ಸಂದೀಪ ಕುಮಾರ ಸಿಂಗ್ (ದ್ವಿತೀಯ).

ಇಶಾನ್ ವಿಭಾಗದಲ್ಲಿ ವಿಜಾಪುರ ಎಂಜಿನಿಯರಿಂಗ್ ಕಾಲೇಜಿನ ಗೌರವ (ಪ್ರಥಮ), ಎಸ್‌ಡಿಎಂ ಕಾಲೇಜಿನ ರಶ್ಮಿ ಸಿ.ಯು. (ದ್ವಿತೀಯ).ಇಂಪಲ್ಸ್ ವಿಭಾಗದಲ್ಲಿ ಹುಬ್ಬಳ್ಳಿ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಲಕ್ಷ್ಮೀ ಭೂಪಾಲಿ (ಪ್ರಥಮ), ಆಕಾಶ ಆರ್.ವಿ. (ದ್ವಿತೀಯ).ಹವ್ಯಾಸ ವಿಭಾಗದ ಕಂಪ್ಯೂಟರ್ ವಿಜ್ಞಾನದಲ್ಲಿ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಅಕ್ಷತಾ ಹೆಬ್ಬಾಳ, ರುಚಿಕಾ ಜೈನ್, ಶ್ರುತಿ ಖೋಡೆ (ಪ್ರಥಮ), ಅಕ್ಷತಾ, ಅಂಕಿತಾ, ಅಶ್ವಿನಿ (ದ್ವಿತೀಯ), ಇ ಆ್ಯಂಡ್ ಇ, ಇಸಿ ವಿಭಾಗದಲ್ಲಿ ಬಿವಿಬಿ ಕಾಲೇಜಿನ ಅಕ್ಷಯ, ಆದಿನಾಥ ಪ್ರತಾಪ್, ಕಾವ್ಯಾ (ಪ್ರಥಮ), ಎಸ್‌ಡಿಎಂ ಕಾಲೇಜಿನ ರೇಣುಕಾ (ದ್ವಿತೀಯ).ಪಿನ್ಯಾಕಲ್ ವಿಭಾಗದಲ್ಲಿ ಎಸ್‌ಡಿಎಂ ಕಾಲೇಜಿನ ಸೂರ್ಯಾ ಖಾನಾಪುರ, ಹಳಿಯಾಳದ ವಿಡಿಆರ್‌ಐಟಿ ಕಾಲೇಜಿನ ಅನುಶಾ ಇಟ್ನಾಳ (ಪ್ರಥಮ), ಎಸ್‌ಡಿಎಂ ಕಾಲೇಜಿನ ಅಯುಶ್ ದಾಂಗ್, ವಿಕಾಶ ಕುಮಾರ (ದ್ವಿತೀಯ), ಬಳ್ಳಾರಿಯ ಬಿಐಟಿಎಂ ಕಾಲೇಜಿನ ನವೀನ ಯಾದವ, ಮೋಹಿತಕುಮಾರ ಜೈನ್ ಕೆ. (ತೃತೀಯ).

ವೆಡ್ ಡಿಸೈನ್ ವಿಭಾಗದಲ್ಲಿ ಬಿವಿಬಿ ಕಾಲೇಜಿನ ಹರೀಶ ಆರ್.ಎಚ್., ಸಂಪತ್‌ಕುಮಾರ ಪಾಟೀಲ, ಮಲ್ಲಿಕಾರ್ಜುನ, ಚೇತನ (ಪ್ರಥಮ).ನಿರೂಪಣ (ಪ್ರಬಂಧ ಮಂಡನೆ) ವಿಭಾಗದಲ್ಲಿ ಎಸ್‌ಡಿಎಂ ಕಾಲೇಜಿನ ಶ್ವೇತಾ ಶ್ರೀ ಶ್ರುತಿ (ಪ್ರಥಮ), ಬಿವಿಬಿ ಕಾಲೇಜಿನ ದಿವ್ಯಾ ಎನ್.ಕೆ., ಗಾಯತ್ರಿ ಎನ್. (ದ್ವಿತೀಯ).ಫೋಟೊಗ್ರಾಫಿ ವಿಭಾಗದಲ್ಲಿ ಎಸ್‌ಡಿಎಂ ಕಾಲೇಜಿನ ಸಪ್ತರ್ಶಿ (ಪ್ರಥಮ), ಆಕಾಶ ಕೆ. (ದ್ವಿತೀಯ).

ಗೇಮಿಂಗ್ ವಿಭಾಗದ ಪಾಕ್ಯೆಟ್ ಟ್ಯಾಂಕ್ ಸ್ಪರ್ಧೆಯಲ್ಲಿ ಎಸ್‌ಡಿಎಂ ಕಾಲೇಜಿನ ಸೈಯ್ಯದ್ ಝುಲ್ಫಿಕರ್ ಹುಸೇನ್ (ಪ್ರಥಮ), ಅಭಿಜಿತ್ ಆನಂದ (ದ್ವಿತೀಯ). ಎನ್‌ಎಫ್‌ಎಸ್ ವಿಭಾಗದಲ್ಲಿ ಶರಣ ಶೆಟ್ಟಿ (ಪ್ರಥಮ), ಕಿಶನ್ ಕೊಲ್ಲಾಪುರ (ದ್ವಿತೀಯ). ಫಿಫಾ-09 ವಿಭಾಗದಲ್ಲಿ ಎಸ್‌ಡಿಂ ಕಾಲೇಜಿನ ಶಶಾಂಕ ಜೆ. (ಪ್ರಥಮ), ಸಚಿನ್ ಕರಿಯತ್ತಿನ (ದ್ವಿತೀಯ).ಕೌಂಟರ್ ಸ್ಟ್ರೈಕ್ 1.6 ವಿಭಾಗದಲ್ಲಿ ಎಸ್‌ಡಿಎಂ ಕಾಲೇಜಿನ ಪ್ರಜ್ವಲ ಭಟ್, ರಾಹುಲ್ ಕೆ.ಎ., ಶ್ರೀನಿವಾಸ ಕುಲಕರ್ಣಿ, ವಿಕಾಸ (ಪ್ರಥಮ), ಶಾಸ್ವತ್, ರೋಹಿತ್ ಸಿನ್ಹಾ, ಸಂಗೀತ ಸುಮನ್ (ದ್ವಿತೀಯ).

ಆ್ಯಡ್ ಮೇಕಿಂಗ್ ವಿಭಾಗದಲ್ಲಿ ಬಳ್ಳಾರಿಯ ಬಿಐಟಿಎಂ ಕಾಲೇಜಿನ ವಿನಯ ಟಿ.ವಿ. (ಪ್ರಥಮ), ಆರ್‌ವೈಎಂಸಿಇ ಕಾಲೇಜಿನ ಸಾಗರ ಆರ್. (ದ್ವಿತೀಯ).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.