ಟೆನಿಸ್‌: ಎಂಟರ ಘಟ್ಟಕ್ಕೆ ಸನಮ್‌

7

ಟೆನಿಸ್‌: ಎಂಟರ ಘಟ್ಟಕ್ಕೆ ಸನಮ್‌

Published:
Updated:

ನವದೆಹಲಿ (ಪಿಟಿಐ): ಅಲ್ಪ ಪ್ರತಿರೋಧ ಎದುರಿಸಿ ಗೆಲುವಿನ ನಗೆ ಬೀರಿದ ಸನಮ್‌ ಸಿಂಗ್‌ ಕೆನಡಾದ ಟೊರಾಂಟೊದಲ್ಲಿ ನಡೆಯುತ್ತಿರುವ ಐಟಿಎಫ್ ಫ್ಯೂಚರ್‌ ಟೆನಿಸ್‌ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸನಮ್‌ 6–4, 7–6ರಲ್ಲಿ ಅಮೆರಿಕದ ಇವಾನ್‌ ಕಿಂಗ್‌ ಎದುರು ಜಯ ಪಡೆದರು. ಭಾರತದ ಆಟಗಾರ ಎಂಟರ ಘಟ್ಟದ ಹೋರಾಟದಲ್ಲಿ ಕೆನಡಾದ ಬ್ರೆಡೆನ್‌ ಸೆಂಚರ್‌ ಎದುರು ಪೈಪೋಟಿ ನಡೆಸಲಿದ್ದಾರೆ.ಡಬಲ್ಸ್‌ ವಿಭಾಗದಲ್ಲಿ ವಿಜಯಂತ್‌ ಮಲಿಕ್ ಜೊತೆಗೂಡಿ ಆಡಿದ ಸನಮ್ ಸೆಮಿಫೈನಲ್‌ ತಲುಪಿದರು. ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಈ ಜೋಡಿ 6–1, 3–6, 11–9ರಲ್ಲಿ ಅಮೆರಿಕದ ಸಕೆಯು ಬೆಂಗುಗೌರಾ ಹಾಗೂ ಎರಿಕ್‌ ಕಿಗ್ಲೆ ಅವರನ್ನು ಮಣಿಸಿತು.ಡಬಲ್ಸ್‌ನ ಇನ್ನೊಂದು ಪಂದ್ಯದಲ್ಲಿ ಭಾರತದ ಶಶಿ ಕುಮಾರ್‌ ಮುಕುಂದ್‌ ಮತ್ತು ಮೊರೊಕ್ಕೊದ ಮಹಮ್ಮದ್‌ 6–3, 3–6, 10–6ರಲ್ಲಿ ಪೋಲೆಂಡ್‌ನ ದರಿಯುಜ್‌ ಲಿಪ್ಕಾ–ಪಾವೆಲ್‌ ಲಿಪ್ಕಾ ಎದುರು ಗೆಲುವಿನ ನಗೆ ಬೀರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry