ಟೆನಿಸ್‌: ಫೈನಲ್‌ಗೆ ಚಂದ್ರಿಲ್‌, ಮೋಹಿತ್‌

7

ಟೆನಿಸ್‌: ಫೈನಲ್‌ಗೆ ಚಂದ್ರಿಲ್‌, ಮೋಹಿತ್‌

Published:
Updated:

ಬೆಂಗಳೂರು: ಮೊದಲ ಸೆಟ್‌ನಲ್ಲಿ ಸೋಲು ಕಂಡರೂ, ಮುಂದಿನ ಎರಡೂ ಸೆಟ್‌ಗಳಲ್ಲಿ ಅಮೋಘ ಆಟವಾಡಿದ ಚಂದ್ರಿಲ್‌ ಸೂಡ್‌ ಡಿಎಸ್‌ ಮ್ಯಾಕ್ಸಿಲ್‌ ಎಐಟಿಎ ಟೆನಿಸ್‌ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.ಕರ್ನಾಟಕ ಲಾನ್‌ ಟೆನಿಸ್‌ ಸಂಸ್ಥೆಯ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ ಹೋರಾಟದಲ್ಲಿ ಚಂದ್ರಿಲ್‌ 4–6, 6–1, 7–6ರಲ್ಲಿ ಕೆ. ನಿತಿನ್‌ ಎದುರು ಗೆಲುವು ಸಾಧಿಸಿದರು. ಇದೇ ವಿಭಾಗದ ಇನ್ನೊಂದು ನಾಲ್ಕರ   ಘಟ್ಟದ ಹಣಾಹಣಿಯಲ್ಲಿ ಮೋಹಿತ್‌ ಮಯೂರ್‌ 6–1, 6–1ರ ನೇರ ಸೆಟ್‌ಗಳಿಂದ ರಿಷಬ್‌ದೇವ್‌ ರಮಣ್‌ ಅವರನ್ನು ಸೋಲಿಸಿ ಪ್ರಶಸ್ತಿ ಘಟ್ಟ ತಲುಪಿದರು.ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಗೆಲುವಿನ ಓಟ ಮುಂದುವರಿಸಿರುವ ಆದ್ಯ್ನಾ ನಾಯ್ಕ್‌ 6–1, 6–1ರಲ್ಲಿ ಸ್ಮತಿ ಜಾನ್‌ ಎದುರು ಸುಲಭ ಗೆಲುವು ಪಡೆದರು.

ಶ್ರೇಯಾಂಕ ರಹಿತ ಆಟಗಾರ್ತಿಯಾ­ಗಿರುವ ಆದ್ಯ್ನಾ ಎಲ್ಲರ ನಿರೀಕ್ಷೆಗಿಂತಲೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈ ವಿಭಾಗದ ಇನ್ನೊಂದು ಸೆಮಿಫೈನಲ್‌ನಲ್ಲಿ ಸಾಯಿ ಸಂಹಿತಾ ‘ಅದೃಷ್ಟ’ದ ಬಲದಿಂದ ಪ್ರಶಸ್ತಿ ಘಟ್ಟ ಮುಟ್ಟಿದರು.ಮೊದಲ ಸೆಟ್‌ನಲ್ಲಿ ಸಂಹಿತಾ 6–3ರಲ್ಲಿ ಗೆಲುವು ಸಾಧಿಸಿದ್ದರು. ಎರಡನೇ ಸೆಟ್‌ ಆರಂಭವಾಗುವ ಮುನ್ನ  ರಿಯಾ ಭಾಟಿಯಾ ಭುಜದ ನೋವಿನಿಂದ ಬಳಲಿದರು. ಇದರಿಂದ ಸಂಹಿತಾ ಅವರ ಫೈನಲ್‌ ಹಾದಿ ಸುಗಮವಾಯಿತು. ಫೈನಲ್‌ ಪಂದ್ಯಗಳು ಶನಿವಾರ ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry