ಟೆನಿಸ್‌: ಫೈನಲ್‌ಗೆ ಸೆರೆನಾ, ಅಜರೆಂಕಾ

7

ಟೆನಿಸ್‌: ಫೈನಲ್‌ಗೆ ಸೆರೆನಾ, ಅಜರೆಂಕಾ

Published:
Updated:

ಬ್ರಿಸ್ಬೇನ್‌ (ರಾಯಿಟರ್ಸ್‌): ಸೆರೆನಾ ವಿಲಿಯಮ್ಸ್‌ ಮತ್ತು ವಿಕ್ಟೋರಿಯಾ ಅಜರೆಂಕಾ ಇಲ್ಲಿ ನಡೆಯುತ್ತಿರುವ ಬ್ರಿಸ್ಬೇನ್‌ ಅಂತರರಾಷ್ಟ್ರೀಯ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ.ಶುಕ್ರವಾರ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ ವಿಶ್ವ ರ‍್ಯಾಂಕ್ನಲ್ಲಿ ಅಗ್ರಸ್ಥಾನ ಹೊಂದಿರುವ ಅಮೆರಿಕದ ಸೆರೆನಾ 6-2, 7-6 ನೇರ ಸೆಟ್‌ಗಳಿಂದ ರಷ್ಯಾದ ಮರಿಯಾ ಶರ್ಪೋವಾ ಅವರನ್ನು ಮಣಿಸಿದರು.ಇನ್ನೊಂದು ನಾಲ್ಕರ ಘಟ್ಟದ ಪೈಪೋಟಿಯಲ್ಲಿ  ವಿಕ್ಟೋರಿಯಾ ಅಜರೆಂಕಾ ಗೆಲುವು ಸಾಧಿಸಿದರು. ಬೆಲಾರಸ್‌ನ ಈ ಆಟಗಾರ್ತಿ 1–6, 6–3, 6–4ರಲ್ಲಿ ಸರ್ಬಿಯಾದ ಜಲೆನಾ ಜಾಂಕೊವಿಕ್‌ ಅವರನ್ನು ಸೋಲಿಸಿದರು. ಶನಿವಾರ ಫೈನಲ್‌ ನಡೆಯಲಿದೆ.ಸೆಮಿಗೆ ಫೆಡರರ್‌:

ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ರೋಜರ್ ಫೆಡರರ್‌, ಕೈ ನಿಷಿಕೋರಿ, ಜರ್ಮೆ ಚಾರ್ಡಿ ಮತ್ತು ಗ್ಲೇನ್‌ ಹೆವಿಟ್‌ ಅವರು ಸೆಮಿಫೈನಲ್‌ ತಲುಪಿದರು.

ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಫೆಡರರ್‌ 6–1, 6–1ರಲ್ಲಿ ಆಸ್ಟ್ರೇಲಿಯಾದ ಮಾರ್ವಿಂಕೊ ಮಾಟೊಸೆವಿಕ್‌ ಎದುರು ಜಯ ಸಾಧಿಸಿದರು.ಇತರ ಎಂಟರ ಘಟ್ಟದ ಪಂದ್ಯಗಳಲ್ಲಿ ಫ್ರಾನ್ಸ್‌ನ ಚಾರ್ಡಿ 7–5, 6–4ರಲ್ಲಿ ಆಸ್ಟ್ರೇಲಿಯಾದ ಸ್ಯಾಮುಯೆಲ್‌ ಗ್ರೋತ್‌ ಮೇಲೂ, ಆಸ್ಟ್ರೇಲಿಯಾದ ಹೆವಿಟ್‌್ 6–4, 6–2ರಲ್ಲಿ ರೂಮೇನಿಯಾದ ಮ್ಯಾರಿಯಸ್‌ ಕೊಪಿಲ್‌ ವಿರುದ್ಧವೂ, ಜಪಾನ್‌ನ ನಿಷಿಕೋರಿ 6–4, 5–7, 6–2ರಲ್ಲಿ ಮರ್ಲಿನ್‌ ಸಿಲಿಕ್‌ ಮೇಲೂ ಗೆಲುವು ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry