ಟೆನಿಸ್‌: ಫೈನಲ್‌ನಲ್ಲಿ ಎಡವಿದ ರೋಹನ್‌- ಐಸಾಮ್‌

7

ಟೆನಿಸ್‌: ಫೈನಲ್‌ನಲ್ಲಿ ಎಡವಿದ ರೋಹನ್‌- ಐಸಾಮ್‌

Published:
Updated:
ಟೆನಿಸ್‌: ಫೈನಲ್‌ನಲ್ಲಿ ಎಡವಿದ ರೋಹನ್‌- ಐಸಾಮ್‌

ಸಿಡ್ನಿ (ಪಿಟಿಐ): ರೋಹನ್‌ ಬೋಪಣ್ಣ ಮತ್ತು ಐಸಾಮ್‌ ಉಲ್‌ ಹಕ್‌ ಖುರೇಷಿ ಜೋಡಿ ಇಲ್ಲಿ ಕೊನೆಗೊಂಡ ಸಿಡ್ನಿ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯಲ್ಲಿ ‘ರನ್ನರ್‌ ಅಪ್‌’ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ಶನಿವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಭಾರತ- ಪಾಕ್‌ ಜೋಡಿಯನ್ನು 7-6, 7-6ರ ನೇರ ಸೆಟ್‌ಗಳಿಂದ ಮಣಿಸಿದ ಡೇನಿಯಲ್‌ ನೆಸ್ಟರ್‌ ಮತ್ತು ನೆನಾದ್‌ ಜಿಮೋಂಜಿಕ್‌ ಕಿರೀಟ ಮುಡಿಗೇರಿಸಿಕೊಂಡರು.ಪೊಟ್ರೊ ಚಾಂಪಿಯನ್‌: ಅರ್ಜೆಂಟೀನಾದ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಇದೇ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರು. ಶನಿವಾರ ನಡೆದ ಫೈನಲ್‌ನಲ್ಲಿ ಅವರು 6-3, 6-1 ರಲ್ಲಿ ಆಸ್ಟ್ರೇಲಿಯಾದ ಬರ್ನಾರ್ಡ್‌ ಟೊಮಿಕ್‌ ವಿರುದ್ಧ ಸುಲಭ ಗೆಲುವು ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry