ಟೆನಿಸ್‌: ಯೂಕಿ ಭಾಂಬ್ರಿಗೆ ರನ್ನರ್‌ ಅಪ್‌ ಪ್ರಶಸ್ತಿ

7

ಟೆನಿಸ್‌: ಯೂಕಿ ಭಾಂಬ್ರಿಗೆ ರನ್ನರ್‌ ಅಪ್‌ ಪ್ರಶಸ್ತಿ

Published:
Updated:

ಕವೊಸಿಯುಂಗ್‌, ತೈವಾನ್‌ (ಪಿಟಿಐ): ಗಮನಾರ್ಹ ಪ್ರದರ್ಶನ ನೀಡಿದ ಭಾರತದ ಯೂಕಿ ಭಾಂಬ್ರಿ ಇಲ್ಲಿ    ನಡೆದ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ಹಾಗೂ ಡಬಲ್ಸ್‌ ವಿಭಾಗದಲ್ಲಿ ರನ್ನರ್‌ ಅಪ್‌ ಪ್ರಶಸ್ತಿ ಜಯಿಸಿದ್ದಾರೆ.ಭಾನುವಾರ ನಡೆದ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಯೂಕಿ  4-6, 3-6ರಲ್ಲಿ ಚೀನಾ ತೈಪೆಯ ಯೆನ್‌ ಸನ್‌ ಲು ಎದುರು ಪರಾಭವಗೊಂಡರು. ಈ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದ ಯೆನ್‌ ಸನ್‌ ಲು ಅವರಿಗೆ ಉತ್ತಮ ಪೈಪೋಟಿಯನ್ನೇ ನೀಡಿದರು. ಆದರೆ 64ನೇ ಕ್ರಮಾಂಕದ ಆಟಗಾರ ಯಾವುದೇ ಆಘಾತಕ್ಕೆ ಆಸ್ಪದ ನೀಡಲಿಲ್ಲ.ಭಾನುವಾರವೇ ಯೂಕಿ ಸೆಮಿಫೈನಲ್‌ ಪಂದ್ಯವನ್ನೂ ಆಡಿದರು. ಮಳೆಯ ಕಾರಣ ಶನಿವಾರ ಈ ಪಂದ್ಯ ನಡೆದಿರಲಿಲ್ಲ. ಅದರಲ್ಲಿ ಭಾರತದ ಯೂಕಿ 6-7, 7-5, 6-3ರಲ್ಲಿ ಅಮೆರಿಕದ ಜಾಕ್‌ ಸಾಕ್‌ಗೆ ಆಘಾತ ನೀಡಿದರು. ಮೊದಲ ಸೆಟ್‌ ಸೋತರೂ ಧೃತಿಗೆಡದ ಅವರು ತಿರುಗೇಟು ನೀಡುವಲ್ಲಿ ಯಶಸ್ವಿಯಾದರು.ಈ ಟೂರ್ನಿಯಲ್ಲಿ ಯೂಕಿ ಅರ್ಹತಾ ಹಂತದ ಮೂರು ಪಂದ್ಯಗಳಲ್ಲಿ ಗೆದ್ದು ಪ್ರಧಾನ ಹಂತದಲ್ಲಿ ಆಡಲು ಅವಕಾಶ ಪಡೆದುಕೊಂಡಿದ್ದರು.

ಈ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಚೀ ಫು ವಾಂಗ್‌ ಜೊತೆಗೂಡಿ ಆಡಿದ ಯೂಕಿ ಫೈನಲ್‌ನಲ್ಲಿ 2-6, 4-6ರಲ್ಲಿ ಕೊಲಂಬಿಯಾದ ಜುವಾನ್‌ ಕೆಬಲ್‌ ಹಾಗೂ ರಾಬರ್ಟ್‌ ಫರಾ ಎದುರು ಸೋಲು  ಕಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry